Home ಅಪರಾಧ FIR filed against 7 people including head teacher| ಬಿಸಿಯೂಟದ ಸಾಂಬಾರು ಪಾತ್ರೆಗೆ ಬಿದ್ದು...

FIR filed against 7 people including head teacher| ಬಿಸಿಯೂಟದ ಸಾಂಬಾರು ಪಾತ್ರೆಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣ: ಮುಖ್ಯ ಶಿಕ್ಷಕಿ ಸಹಿತ 7 ಮಂದಿ ವಿರುದ್ಧ ಎಫ್ಐಆರ್

49
0
8 year old girl died after falling into sambar pot in school

ಕಲಬುರಗಿ:

ಅಫಜಲಪುರ ತಾಲೂಕಿನ ಚಿಮಣಗೇರಾ ಸರಕಾರಿ ಶಾಲಾ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿರುವ ಎರಡನೇ ತರಗತಿ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮೃತಪಟ್ಟ ಸಂಬಂಧಿಸಿದಂತೆ ತಾಯಿ 7 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥಿನಿ ಮಹಾಂತಮ್ಮ (8) ಅವರ ತಾಯಿ ಸಂಗೀತಾ ಅವರು ನೀಡಿದ ದೂರಿನ ಮೇರೆಗೆ ದೇವಲಗಾಣಗಾಪುರ ಪೊಲೀಸರು ಶಾಲಾ ಮುಖ್ಯ ಶಿಕ್ಷಕಿ, ಅಡುಗೆ ಸಿಬ್ಬಂದಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನವೆಂಬರ್ 16ರಂದು ಬಿಸಿಯೂಟ ತಯಾರಿಸುವ ಸಾಂಬಾರು ಪಾತ್ರೆಯಲ್ಲಿ ವಿದ್ಯಾರ್ಥಿನಿ ಬಿದ್ದಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತಮ್ಮಳನ್ನ ಕಲಬುರಗಿಯ ಜಿಮ್ಸ್‌ಗೆ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ರವಿವಾರ) ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.  

LEAVE A REPLY

Please enter your comment!
Please enter your name here