Home ಬೆಂಗಳೂರು ನಗರ Prajwal Revanna | ಸಂಸದ ಸ್ಥಾನಕ್ಕೆ ಅನರ್ಹ: ಹೈಕೋರ್ಟ್​ ಆದೇಶಕ್ಕೆ ತಡೆ, ಪ್ರಜ್ವಲ್​​ ರೇವಣ್ಣಗೆ ಸುಪ್ರೀಂನಿಂದ...

Prajwal Revanna | ಸಂಸದ ಸ್ಥಾನಕ್ಕೆ ಅನರ್ಹ: ಹೈಕೋರ್ಟ್​ ಆದೇಶಕ್ಕೆ ತಡೆ, ಪ್ರಜ್ವಲ್​​ ರೇವಣ್ಣಗೆ ಸುಪ್ರೀಂನಿಂದ ತಾತಾಲ್ಕಿಕ ರಿಲೀಫ್​

34
0
Prajwal Revanna
Prajwal Revanna

ನವದೆಹಲಿ/ಬೆಂಗಳೂರು:

ಚುನಾವಣಾ ಆಯೋಗಕ್ಕೆ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿರುವ ಆರೋಪದ ಮೇರೆಗೆ ಹಾಸನ ಲೋಕಸಭೆ ಕ್ಷೇತ್ರದ ಸಂಸದ ಪ್ರಜ್ವಲ್​ ರೇವಣ್ಣರನ್ನು ಸಂಸತ್​ ಸದಸ್ಯತ್ವದಿಂದ ಅನರ್ಹಗೊಳಿಸಿ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್​ ಇಂದು (ಸೆ.18) ತಡೆಯಾಜ್ಞೆ ನೀಡಿದೆ.

ಹೈಕೋರ್ಟ್​ ಆದೇಶವನ್ನು 4 ವಾರಗಳ ಕಾಲ ಸುಪ್ರೀಂಕೋರ್ಟ್​ ಅಮಾನತಿನಲ್ಲಿ ಇಟ್ಟಿದೆ. ಇಂದಿನ ಆದೇಶ ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್​ ನೀಡಿದ್ದು, ಗಣೇಶ ಚತುರ್ಥಿಯ ಶುಭ ದಿನಕ್ಕೆ ಡಬಲ್​ ಖುಷಿ ನೀಡಿದಂತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಆರೋಪ ಕೇಳಿ ಬಂದಿತ್ತು. ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದ ಅಂದಿನ ಬಿಜೆಪಿಯ ಎ.ಮಂಜು ಹಾಗೂ ಪಕ್ಷೇತರ ಅಭ್ಯರ್ಥಿ ದೇವರಾಜೇಗೌಡ ಎಂಬುವವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ ಎಂದು ದೂರುದಾರರು ಗಂಭೀರ ಆರೋಪ ಮಾಡಿದ್ದರು. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿ ಕೆ.ನಟರಾಜನ್​ ಅವರಿದ್ದ ಪೀಠವು ಸೆ.1ರಂದು ಸಂಸತ್​ ಸದಸ್ಯತ್ವದಿಂದ ಪ್ರಜ್ವಲ್​ ರೇವಣ್ಣರನ್ನು ಅನರ್ಹಗೊಳಿಸಿ ತೀರ್ಪು ನೀಡಿತ್ತು.

ರಾಜ್ಯ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್​ ರೇವಣ್ಣ ಪರ ವಕೀಲರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಹೈಕೋರ್ಟ್​ ಆದೇಶಕ್ಕೆ ಇಂದು ತಡೆಯಾಜ್ಞೆ ನೀಡಿದೆ.
[11:13 PM, 9/18/2023] Atul Sir: 11am

Karnataka: Ramesh Jarakiholi — HD Kumaraswamy holds discussion

Karnataka: ರಮೇಶ್ ಜಾರಕಿಹೊಳಿ — HD ಕುಮಾರಸ್ವಾಮಿ ಭೇಟಿ, ಮಾತುಕತೆ

ಬೆಂಗಳೂರು:

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಹಾಗೆಯೇ ಇಬ್ಬರು ನಾಯಕರು ಗೌರಿ ಗಣೇಶ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇಬ್ಬರು ಮಧ್ಯೆ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here