ಬೆಂಗಳೂರು:
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಶಿವರಾಜ್ ಕುಮಾರ್ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ನಾಗವಾರದಲ್ಲಿರುವ ಸೆಂಚುರಿ ಸ್ಟಾರ್ ನಿವಾಸಕ್ಕೆ ತೆರಳಿರುವ ಸುರ್ಜೇವಾಲ, ಶಿವಣ್ಣನ ಜೊತೆಗೆ ಮಾತುಕತೆ ನಡೆಸಿದ್ದು, ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಸುರ್ಜೇವಾಲ, ‘ಕಾಂಗ್ರೆಸ್ ಪ್ರಚಾರಕ್ಕೆ ಶಕ್ತಿ ತುಂಬಿದ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಜನಪ್ರಿಯ ಕಲಾವಿದ ಮತ್ತು ಅದ್ಭುತ ವ್ಯಕ್ತಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
Was indeed a pleasure and honour to meet with one and only Sh. Shiva Rajkumar @NimmaShivanna & Geetha Shivarajkumar at their residence.
— Randeep Singh Surjewala (@rssurjewala) May 23, 2023
Thanked one of the most popular artist and even a better human being for powering the Congress campaign and participating in the festival of… pic.twitter.com/mrkefIwfpY
‘ತಮ್ಮ ವಿಶಿಷ್ಟ ಪರಂಪರೆಯೊಂದಿಗೆ ಗೀತಾ ಶಿವರಾಜಕುಮಾರ್ ಈಗಾಗಲೇ ಕಾಂಗ್ರೆಸ್ ಕುಟುಂಬದ ಭಾಗವಾಗಿದ್ದಾರೆ. ಕರ್ನಾಟಕವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಪ್ರತಿಜ್ಞೆಯ ಮೇಲೆ ಒಟ್ಟಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.