ಬೆಳಗಾವಿ: ಬೆಳಗಾವಿಯ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 4 ರಿಂದ 5 ವಯಸ್ಸಿನ ಕೃಷ್ಣಮೃಗ ಗಳ ಹಠಾತ್ ಸಾವಿನ ಪ್ರಕರಣ ಮತ್ತೆ ವರದಿಯಾಗಿದ್ದು, 28 ಮೃಗಗಳು দুರ್ದೈವವಾಗಿಯೇ ಎರಡು ದಿನಗಳಲ್ಲಿ ಸಾವು ಹೊಂದಿರುವುದು ಆತಂಕದ ವಿಷಯವಾಗಿದೆ.
ಮೃಗಾಲಯದ ನಿರ್ವಾಹಕ ಎಸಿಫ್ ನಾಗರಾಜ್ ಬಾಳೆಹೊಸೂರು ಈ ವಿಷಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಾವುಗಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಸಂಭವಿಸಿರುವ ಸಾಧ್ಯತೆ ಇದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸತತ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು.
ಒಟ್ಟು 38 ಕೃಷ್ಣಮೃಗಗಳಲ್ಲಿ 18 ಮೊದಲು, ನಂತರ ಇನ್ನೊಂದು 10 ಮೃಗಗಳು ಎರಡು ದಿನಗಳ ಅವಧಿಯಲ್ಲಿ ಸಾವನ್ನಪ್ಪಿದ್ದು, ಮೃತ ಮೃಗಗಳಿಗೆ ಅಂತ್ಯಕ್ರಿಯೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಲಭ್ಯವಾದ ಬಳಿಕ ಸಾವಿನ ನಿಖರ ಕಾರಣಗಳು ಬಹಿರಂಗಗೊಳ್ಳುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ಇಲಾಖೆಯ ತುರ್ತು ಪರಿಶೀಲನೆ
ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಸಂಭವಿಸಿರುವ ಈ ದುರ್ಘಟನೆದ ಹಿನ್ನೆಲೆಯಲ್ಲಿ, ಬೆಳಗಾವಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತುರ್ತು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿ,ಮೃಗಾಲಯದ ವಾತಾವರಣ, ಮೃಗಗಳ ನೆಡೆ, ಆಹಾರ, ನೀರು, ವೈದ್ಯಕೀಯ ದಾಖಲೆಗಳು ಮತ್ತು ಇತರೆ ನಿರ್ವಹಣಾ ಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ.
ಮೃಗಾಲಯದ ವೈದ್ಯರು ಮತ್ತು ಸಿಬ್ಬಂದಿಗೆ ತ್ವರಿತ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
