ಅಹ್ಮದಾಬಾದ್: T20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಮೂರನೇ ಬಾರಿಗೆ ಭಾರತ ತಂಡ ಪ್ರಶಸ್ತಿ ಎತ್ತಿಹಿಡಿದಿದ್ದು, ಇದಕ್ಕೆ ಪ್ರೇಯಸಿ ಮಹಿಕಾಶರ್ಮಾ ಕಾರಣ ಎಂದು ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಸೋಲಿಸಿದ ಭಾರತ, ಐತಿಹಾಸಿಕ ಟಿ20 ವಿಶ್ವಕಪ್ ಪ್ರಶಸ್ತಿ ಜಯಿಸಿತು.
ಈ ಗೆಲುವಿನ ಸಂಭ್ರಮದ ನಡುವೆ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ ಮಹಿಕಾ ಶರ್ಮಾ ಕುರಿತು ಆಡಿರುವ ಮಾತುಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹಾರ್ದಿಕ್ ಹೇಳಿದ್ದೇನು?
ಪ್ರಶಸ್ತಿ ಗೆಲುವಿನ ನಂತರ ಮಾತನಾಡಿದ ಪಾಂಡ್ಯ, ‘ನನ್ನಲ್ಲಿ ಇನ್ನೂ 10 ವರ್ಷಗಳ ಕ್ರಿಕೆಟ್ ಉಳಿದಿವೆ. ಹಾಗೆಯೇ ನಾನು 10 ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಬಯಸುತ್ತೇನೆ.
ಅದೇ ನನ್ನ ಗುರಿ. ಈ ಗೆಲವು ಸಾಕಷ್ಟು ಭಾವನಾತ್ಮಕವಾಗಿದೆ. ಆದಾಗ್ಯೂ, ಭಾರತದಲ್ಲಿ ವಿಶ್ವ ಕಪ್ ಗೆದ್ದ ನಂತರ ಜನರ ಉತ್ಸಾಹ ಅದ್ಭುತವಾಗಿದೆ. ನಿನ್ನೆಯಿಂದ ನಾವು ಮಾಡಿದ ಪ್ರಯತ್ನವನ್ನು ನೋಡಿದಾಗ ಚಾಂಪಿಯನ್ಗಳು ನಾವೇ ಎಂದು ತಿಳಿದಿತ್ತು ಎಂದರು.
ಅಂತೆಯೇ, ‘ಆ ಓವರ್ ಎಸೆಯುವಾಗ ನನ್ನ ಕಣ್ಣಮುಂದೆ 2024 ರ ಟಿ20 ವಿಶ್ವಕಪ್ ಫೈನಲ್ನ ಕ್ಷಣಗಳು ಸುಳಿದವು. ಅಂದು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಓವರ್ನಲ್ಲಿ ಎಷ್ಟು ಒತ್ತಡವಿತ್ತೋ, ಇಂದೂ ಅಷ್ಟೇ ಇತ್ತು.
ಆ ನೆನಪುಗಳು ನನಗೆ ಶಾಂತವಾಗಿರಲು ಮತ್ತು ಸರಿಯಾದ ಜಾಗಕ್ಕೆ ಬೌಲಿಂಗ್ ಮಾಡಲು ಸಹಾಯ ಮಾಡಿದವು. ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ನಾನು ಇಂಗ್ಲೆಂಡ್ ವಿರುದ್ಧ 19 ನೇ ಓವರ್ ಬೌಲಿಂಗ್ ಮಾಡುವಾಗ, 2024 ರ ವಿಶ್ವಕಪ್ ಫೈನಲ್ ಬಗ್ಗೆ ಯೋಚಿಸುತ್ತಿದ್ದೆ. ಬ್ಯಾಟಿಂಗ್ ಮಾಡಲು ಹೋದಾಗ ನಾನು ಕಿಶನ್ ಮತ್ತು ಅಭಿಷೇಕ್ ಹತ್ತಿರ ಈ ವಿಚಾರದ ಬಗ್ಗೆ ಮಾತನಾಡಿದೆ ಎಂದರು.
Hardik Pandya celebrating the T20 World Cup victory with his girlfriend Mahieka Sharma. pic.twitter.com/IhJGFFlvP6
— MuFFatLal Bohra (@arshdeep3444) March 8, 2026
ಮಹಿಕಾ ಬಗ್ಗೆ ಮಾತು
ಪಂದ್ಯದ ಉದ್ದಕ್ಕೂ ಹಾರ್ದಿಕ್ ನೆರಳಿನಂತೆ ಇದ್ದ ಗೆಳತಿ ಮಹೀಕಾ ಶರ್ಮಾ ತಮ್ಮ ಈ ಗೆಲುವಿನ ಹಿಂದಿನ ಶಕ್ತಿ ಎಂದು ಹಾರ್ದಿಕ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮಹೀಕಾ ನನ್ನ ಜೀವನದಲ್ಲಿ ಬಂದಾಗಿನಿಂದ, ನಾನು ಗೆಲ್ಲುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯಾ ಹೇಳಿಕೊಂಡಿದ್ದಾರೆ.
Hardik Pandya and Ishan Kishan dancing with their girlfriends after winning the T20 World Cup 2026 final.❤#INDvsNZ #T20WorldCup pic.twitter.com/8uO7NiuD9c
— Indian Cricket (@IPL2025Auction) March 9, 2026
तिरंगा ओढ़कर हार्दिक पांड्या को ये सब हरकतें नहीं करनी चाहिए खुलेआम
दीपिका पादुकोण ने ‘बेशर्म रंग’ गाने में बिकनी पहनी तो बवाल हुआ था
Hardik Pandya स्टेडियम में तिरंगा ओढ़कर अपनी प्रेमिका के साथ जो कर रहे हैं, वो कूल ड्यूड बनने का पागलपन है
ये भारत के संस्कार भी नहीं हैं pic.twitter.com/aT71UJ7L3O
— Abhay Pratap Singh (बहुत सरल हूं) (@IAbhay_Pratap) March 9, 2026
