ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ಸೋತ ನಂತರ ತಂಡದ ಆಯ್ಕೆಯಲ್ಲಿ ಎಡವಿದ ಗೌತಮ್ ಗಂಭೀರ್ ಹಾಗೂ ಸೂರ್ಯ ಕುಮಾರ್ ಯಾದವ್ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ.
ಅದರಲ್ಲೂ ಉಪ ನಾಯಕನಾಗಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಬದಲಿಗೆ ಮತ್ತೊಬ್ಬ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಅವರನ್ನು ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಿಸಿ ಸೋತಿದ್ದಕ್ಕೆ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತ ನಂತರ ಮಾತನಾಡಿದ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಕೇಟ್ , ಸುಧೀರ್ಘ ಹೊತ್ತು ನಡೆದ ತಂಡದ ಸಭೆಯಲ್ಲಿ ಅಕ್ಷರ್ ಪಟೇಲ್ ಬದಲಿಗೆ ವಾಶಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ಅವರಿಬ್ಬರಲ್ಲಿ ವಾಶಿಂಗ್ಟನ್ ಬೌಲಿಂಗ್ ನ ವೈವಿಧ್ಯತೆ ಹರಿಣಗಳಿಗೆ ಹೆಚ್ಚು ತಲೆನೋವಾಗಬಲ್ಲುದು. ಅವರು ಚೆಂಡನ್ನು ಹೆಚ್ಚು ತಿರುಗಿಸಬಲ್ಲವರಾಗಿದ್ದರಿಂದ ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್ ಗೆ ಇಳಿಸಿ ಹರಿಣಗಳನ್ನು ಕಟ್ಟಿ ಹಾಕಬಹುದು ಎಂಬುದು ಟೀಂ ಇಂಡಿಯಾದ ಲೆಕ್ಕಾಚಾರವಾಗಿತ್ತು ಎಂಬುದನ್ನು ಒಪ್ಪಿಕೊಂಡರು.
ನಮಗೆ ಎಂಟನೇ ಬ್ಯಾಟರ್ ಆಗಿ ರಿಂಕು ಸಿಂಗ್ ಅಗತ್ಯವಿದೆ ಎಂದು ಭಾವಿಸಿದ್ದೇವು. ಹಾಗಾಗೀ ಅವರಿಗೆ ಅವಕಾಶ ನೀಡಲಾಯಿತು. ಆದರೆ, ಅವರು ಕೂಡಾ ವಿಫಲವಾದರೂ. ಇದು ಅಕ್ಷರ್ ಪಟೇಲ್ ಅವರಿಂದ ಉಪ ನಾಯಕತ್ವ ಕಸಿದುಕೊಳ್ಳಲು ಮಾಡಿದ ಪ್ರಯತ್ನವಲ್ಲ. ಕೊನೆಯವರೆಗೂ ಫ್ಲೇಯಿಂಗ್ ಇಲೆವೆನ್ ಬಲಿಷ್ಠವಾಗಿರುವಂತೆ ತಂಡ ನಿರ್ಧಾರ ಕೈಗೊಂಡಿತ್ತು. ಆದರೆ, ಅದು ವಿಫಲವಾಯಿತು ಎಂದು ತಿಳಿಸಿದರು.
ವಾಷಿಂಗ್ಟನ್ ಸುಂದರ್ ಆಡಿಸಿದ್ದು, ತೀವ್ರ ವಿವಾದಕ್ಕೆ ಗುರಿಯಾಗಿದೆ. ಅವರು ಗುಜರಾತ್ ಟೈಟಾನ್ಸ್ಗಾಗಿ ಐಪಿಎಲ್ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಐಪಿಎಲ್ ಪಂದ್ಯಗಳು ಮಾತ್ರ ಏಕೈಕ ಮಾನದಂಡವಲ್ಲ. ವಾಶಿಂಗ್ಟನ್ ಸುಂದರ್ ಭಾರತ ತಂಡದೊಂದಿಗೆ ಏನು ಮಾಡಿದ್ದಾರೆಂದು ನಮಗೆ ತಿಳಿದಿದೆ. ಅವರು T20 ಗಳಲ್ಲಿ ಪವರ್ಪ್ಲೇನಲ್ಲಿ ಎಷ್ಟು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ ಎಂಬುದು ತಂತ್ರದ ಭಾಗವಾಗಿತ್ತು ಎಂದು ಟೆನ್ ಡೋಸ್ಚೇಟ್ ಹೇಳಿದರು.
ಈ ರೀತಿಯ ಪಂದ್ಯಗಳಲ್ಲಿ ತಂಡದ ಆಯ್ಕೆ, ಫಲಿತಾಂಶಗಳು ಮುಖ್ಯವಾಗಿರುತ್ತದೆ. ಭಾರತದ ಯೋಜನೆ ಕೈಗೂಡಲಿಲ್ಲ. ಮಧ್ಯಮ ಓವರ್ಗಳು ಜಾರಿದವು. ಬ್ಯಾಲೆನ್ಸ್ ಇರಲಿಲ್ಲ. ಇನ್ನೂ ಎರಡು ಸೂಪರ್ 8 ಆಟಗಳು ಉಳಿದಿದ್ದು, ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
