ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ತವರು ನೆಲದಲ್ಲಿಯೇ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಮಣಿಸುವ ಮೂಲಕ ಜಿಂಬಾಬ್ವೆ ಶಾಕ್ ನೀಡಿತು. ಇದರೊಂದಿಗೆ ಬಿ ಗ್ರೂಪ್ ನಲ್ಲಿ ಅಗ್ರಸ್ಥಾನಕ್ಕೇರಿತು.
ಹೌದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಪಥುಮ್ ನಿಶಾಂಕಾ 62, ಕುಶಾಲ್ ಪೆರೆರಾ 22,ಕುಶಾಲ್ ಮೆಂಡಿಸ್ 14, ಪವನ್ ರತ್ನಾಯಕ್ 44, ದುನಿತ್ ವೆಲಾಲಾಗೆ 15 ರನ್ ಗಳಿಸಿದರು. ಉಳಿದಂತೆ ಯಾವುದೇ ಆಟಗಾರರು ಎರಡಂಕಿ ದಾಟುವಲ್ಲಿ ವಿಫಲರಾದರು. ಇದರಿಂದಾಗಿ ನಿಗದಿತ ಓವರ್ ಗಳಲ್ಲಿ 178 ರನ್ ಗಳಿಸಿದ ಶ್ರೀಲಂಕಾ, ಜಿಂಬಾಬ್ವೆಗೆ 179 ರನ್ ಗಳ ಗೆಲುವಿನ ಗುರಿ ನೀಡಿತು.
ಈ ಗುರಿ ಬೆನ್ನಟ್ಟಿದ್ದ ಜಿಂಬಾಬ್ವೆ ಪರ ಬ್ರಿಾನ್ ಬೆನ್ನೆಟ್ ಅಜೇಯ 63, ತಾಡಿವಾನಾಸೆ ಮುರಾಮಣಿ 34, ರಿಯಾನ್ ಬುರಿ 23 ಹಾಗೂ ಸಿಕಂದರ್ ರಾಜಾ 45 ರನ್ ಮತ್ತು ಟೋನಿ ಮುನ್ಯೊಂಗಾ 8 ರನ್ ಗಳಿಸುವುದರೊಂದಿಗೆ 19.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು.
ಇನ್ನೂ ಚೆನ್ನೈನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕೆನಡಾ ವಿರುದ್ಧ ಅಪ್ಘಾನಿಸ್ತಾನ 82 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಘಾನಿಸ್ತಾನ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಅಪ್ಘಾನ್ ಪರ ಇಬ್ರಾಹಿಂ ಜದರನ್ ಅಜೇಯ 95 ರನ್ ಗಳಿಸುವ ಮೂಲಕ ಶತಕದಿಂದ ವಂಚಿತರಾದರು.
ಅಪ್ಘಾನಿಸ್ತಾನ ನೀಡಿದ 201 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕೆನಡಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಅಪ್ಘಾನ್ ಪರ ಮೊಹಮ್ಮದ್ ನಬಿ 4 ವಿಕೆಟ್ ಕಬಳಿಸಿದರೆ ರಶೀದ್ ಖಾನ್ 2, ಮುಜೀಬ್ ಉರ್ ರೆಹಮಾನ್ ಹಾಗೂ ಒಮರ್ ಝೈ ತಲಾ ಒಂದು ವಿಕೆಟ್ ಪಡೆದರು. ಇದರೊಂದಿಗೆ 82 ರನ್ ಗಳ ಅಂತರದಿಂದ ಅಪ್ಘಾನಿಸ್ತಾನ ಗೆಲುವು ಸಾಧಿಸಿತು.
