ನವದೆಹಲಿ: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 76 ರನ್ ಗಳಿಂದ ಸೋತ ಭಾರತದ ಸೆಮಿಫೈನಲ್ ಹಾದಿ ಕಷ್ಟವಾಗಿದೆ.
ಹರಿಣಿಗಳಿಂದ ಭಾರತ ಸೋತ ಬಳಿಕ ಡಗ್ ಔಟ್ ನಲ್ಲಿ ಕುಳಿತಿದ್ದ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಸೂರ್ಯ ಕುಮಾರ್ ಯಾದವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ವಿಚಾರದಲ್ಲಿ ಈ ಮಾತಿನ ಚಕಮಕಿ ನಡೆದಿರುವ ಸಾಧ್ಯತೆಯಿದೆ.
After losing the match against South Africa, Suryakumar Yadav was seen looking quite upset in the dugout. He appeared to be having a serious discussion with Gautam Gambhir and the rest of the support staff. pic.twitter.com/FDgxSGKIN4
— ⁴⁵ (@rushiii_12) February 22, 2026
ಟಿ-20 ಮಾದರಿಯಲ್ಲಿ ದಾಖಲೆಯ ಸತತ 12 ಗೆಲುವಿನ ನಂತರ ಭಾರತಕ್ಕೆ ಮೊದಲ ಸೋಲಾಗಿದೆ. 2022 ರ ಟಿ 20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯದಾಗಿ ಭಾರತ ಸೋತಿತ್ತು.
