ಮುಂಬೈ: T20 ವಿಶ್ವಕಪ್ 2026 ಟೂರ್ನಿಯ ಸೆಮಿಫೈನಲ್ ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದ್ದು, ಈ ಪಂದ್ಯಕ್ಕೂ ಮುನ್ನಲೇ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುವ ಮಾತುಗಳನ್ನಾಡಿದ್ದಾರೆ.
ಹೌದು.. ನಾಳೆ ಅಂದರೆ ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಸ್ಯಾಮ್ ಕರನ್ ಪಂದ್ಯ ಗೆಲ್ಲುವ ಮಾತುಗಳನ್ನಾಡಿದ್ದಾರೆ.
ಭಾರತದ ವಿರುದ್ದದ ಸೆಮಿ ಫೈನಲ್ ಪಂದ್ಯದ ಸಿದ್ಧತೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್ ಕರನ್, ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ. ನಮ್ಮ ಬಳಿ ಮ್ಯಾಜಿಕ್ ಬುಲೆಟ್ ಇದೆ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ದ ಗೆಲುತ್ತದೆ ಎಂದು ಹೇಳಿದ್ದಾರೆ.
‘ನಾಳೆ ಸಾವಿರಾರು ಅಭಿಮಾನಿಗಳು ವಾಂಖೆಡೆ ಕ್ರೀಡಾಂಗಣಕ್ಕೆ ಬರುತ್ತಾರೆ. ನಾವು ಅವರೆಲ್ಲರನ್ನೂ ಮೌನವಾಗಿಡಲು ನಮ್ಮದೇಯಾದ ಪ್ಲಾನ್ ರೆಡಿ ಮಾಡುತ್ತಿದ್ದೇವೆ. ಭಾರತ ಸೋತರೆ, ಅವರೆಲ್ಲರು ತಮ್ಮ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ಸುಮ್ಮನೇ ಕುಳಿತುಕೊಳ್ಳುತ್ತಾರೆ. ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಮರೆಯಲಾಗದ ಸೋಲನ್ನು ನಾಳೆ ಅನುಭವಿಸಲಿದೆ’ ಎಂದು ಸ್ಯಾಮ್ ಕರನ್ ಭವಿಷ್ಯ ನುಡಿದ್ದಾರೆ.
ಅಂತೆಯೇ ಅಭಿಷೇಕ್ ಶರ್ಮಾ ಅದ್ಬುತವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ, ಅವರನ್ನು ಬೇಗನೆ ಔಟ್ ಮಾಡಲು ನಮ್ಮ ಬಳಿ ಮ್ಯಾಜಿಕ್ ಬುಲೆಟ್ ಇದೆ. ಅದೇನೇ ಇರಲಿ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ದ ಗೆಲ್ಲುತ್ತದೆ. ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಮರೆಯಲಾಗದ ಸೋಲನ್ನು ನಾಳೆ ಅನುಭವಿಸಲಿದೆ ಎಂದು ಸ್ಯಾಮ್ ಕರನ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಲಿದೆ. ಗುರುವಾರ (ಮಾ.05) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವೆನಿಸಿದೆ. ಈ ಮ್ಯಾಚ್ನಲ್ಲಿ ಗೆದ್ದ ತಂಡ ಫೈನಲ್ಗೇರಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
“We’re confident. We haven’t quite played the perfect performance yet.
“I feel like it’s just round the corner. Hopefully that’s tomorrow night”.
The captain’s press conference in full
— England Cricket (@englandcricket) March 4, 2026
