ಬೆಂಗಳೂರು: ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಆಕ್ರಮಣ ಕಾರಿ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ಕೈ ಗೊಳ್ಳುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಪಡಿಸುವಂತೆ ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಮತ್ತು ಸುಪ್ರಿಕೋರ್ಟ್ʼಗೆ ಮನವಿ ಸಲ್ಲಿಸಲು ಸಕಾಲ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಟಿ. ಎ.ಶರವಣ ಹೇಳಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿ ಸಭೆಯಲ್ಲೂ, ಪ್ರತಿ ಬಾರಿಯೂ ಕರ್ನಾಟಕದ ವಿರುದ್ಧವೇ ಸೂಚನೆ, ಶಿಫಾರಸು ನೀಡುತ್ತಿರುವ ಈ ಸಮಿತಿಗಳು ತಾರತಮ್ಯ ಮಾಡುತ್ತಿವೆ. ಆದ್ದರಿಂದ ಈ ಸಮಿತಿಗಳ ಬಣ್ಣ ಬಯಲು ಮಾಡಲಿ ಎಂದವರು ರಾಜ್ಯ ಸರಕಾರಕ್ಕೆ ಆಗ್ರಹ ಪಡಿಸಿದರು.
ಈ ವೇಳೆ ರಾಜ್ಯ ಸರ್ಕಾರದ ವೈಫಲ್ಯತೆಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿಯೇ ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರವೇ ರಾಜ್ಯದ ರೈತರಿಗೆ ಮೋಸ ಮಾಡಿದೆ ಎಂದು ಶರವಣ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಂಡಿಯಾ ಒಕ್ಕೂಟದ ಭಾಗವಾಗಿರುವ ತಮಿಳುನಾಡು ಸಿಎಂ ಮನವೊಲಿಸಲು, ಕೃಪೆಗೆ ಪಾತ್ರರಾಗಲು ಕರ್ನಾಟಕದ ಕಾಂಗ್ರೆಸ್ ಸರಕಾರ ನೀರು ಬಿಟ್ಟೂ ಬಿಟ್ಟೂ ರೈತರ ಹಿತಾಸಕ್ತಿ ಬಲಿ ಕೊಟ್ಟಿದ್ದಾಯ್ತು.ಈಗಲಾದರೂ ನೀರು ಬಿಡುವುದಿಲ್ಲ ಎನ್ನುವ ಧೈರ್ಯ, ಸ್ಥೈರ್ಯ ತೋರಬೇಕು. ಇಂಥ ತಾಕತ್ತು ಈ ಸರಕಾರಕ್ಕೆ ಇದೆಯೇ? ಎಂದು ಅವರು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ನಿಂದ ನೇಮಕ ವಾಗುವ ಸ್ವತಂತ್ರ ತಜ್ಞರ ನಿಯೋಗ ಕರ್ನಾಟಕದ ಮತ್ತು ತಮಿಳುನಾಡಿನ ಜಲಾಶಯಗಳಿಗೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ನೀಡಲೀ. ಅದರ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡಲಿ, ಹಾಗೆ ಇದೆಲ್ಲದರ ಕುರಿತಂತೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು.
The post TA Sharavana: ಕಾವೇರಿ ನೀರು ಬಿಡಲ್ಲ ಎನ್ನುವ ಧೈರ್ಯ ತೋರಬೇಕು, ಇಂಥ ತಾಕತ್ತು ಈ ಸರ್ಕಾರಕ್ಕೆ ಇದೆಯೇ?: ಟಿ.ಎ.ಶರವಣ ಪ್ರಶ್ನೆ! appeared first on Ain Live News.