Home Uncategorized Tata Motors Price Hike: ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟರ್ಸ್; ಜನವರಿಯಿಂದ ಜಾರಿಗೆ

Tata Motors Price Hike: ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಟಾಟಾ ಮೋಟರ್ಸ್; ಜನವರಿಯಿಂದ ಜಾರಿಗೆ

17
0

ನವದೆಹಲಿ: ಜನವರಿಯಿಂದ ವಾಣಿಜ್ಯ ವಾಹನಗಳ (Commercial Vehicle) ಬೆಲೆ ಶೇಕಡಾ 2ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟರ್ಸ್ (Tata Motors) ಮಂಗಳವಾರ ತಿಳಿಸಿದೆ. ವೆಚ್ಚ ಹೆಚ್ಚಳದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ದರ ಹೆಚ್ಚಳವು ವಾಹನದ ಮಾದರಿ, ವೇರಿಯೆಂಟ್​ಗೆ ಅನುಗುಣವಾಗಿ ಬದಲಾಗಲಿದೆ. ಎಲ್ಲ ವಿಧದ ವಾಣಿಜ್ಯ ವಾಹನಗಳಿಗೂ ದರ ಹೆಚ್ಚಳ ಅನ್ವಯವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ದರ ಹೆಚ್ಚಳವನ್ನು ಆದಷ್ಟು ಮಟ್ಟಿಗೆ ಕಂಪನಿಯೇ ಭರಿಸುತ್ತಿದೆ. ಆದಾಗ್ಯೂ ಒಟ್ಟಾರೆ ಇನ್​ಪುಟ್ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿರುವುದರಿಂದ ಇದರ ಸಣ್ಣ ಪ್ರಮಾಣವನ್ನು ದರ ಹೆಚ್ಚಳದ ಮೂಲಕ ಭರಿಸದೇ ಬೇರೆ ದಾರಿಯಿಲ್ಲ ಎಂದು ಕಂಪನಿ ಹೇಳಿದೆ. ದೇಶದ ವಾಣಿಜ್ಯ ವಾಹನ ತಯಾರಿಯಲ್ಲಿ ಟಾಟಾ ಮೋಟರ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ.

ಮುಂದಿನ ತಿಂಗಳಿನಿಂದ ಪ್ರಯಾಣಿಕ ವಾಹನ ಬೆಲೆ ಹೆಚ್ಚಿಸುವುದಾಗಿ ಕಂಪನಿ ಈಗಾಗಲೇ ಘೋಷಿಸಿದೆ. ದರ ಹೆಚ್ಚಳವು ವಿವಿಧ ಮಾದರಿಗಳಿಗೆ ಅನುಗುಣವಾಗಿ ವ್ಯತ್ಯಾಸವಿರಲಿದೆ ಎಂದು ಟಾಟಾ ಮೋಟರ್ಸ್ ತಿಳಿಸಿದೆ.

ಇದನ್ನೂ ಓದಿ: Car Prices Hike: ಜನವರಿಯಿಂದ ದುಬಾರಿಯಾಗಲಿವೆ ಈ ಕಾರುಗಳು

ಟಾಟಾ ಮಾತ್ರವಲ್ಲದೆ ಮಾರುತಿ ಸುಜುಕಿ ಇಂಡಿಯಾ, ರೆನಾಲ್ಟ್ ಸಹ ಕಾರುಗಳ ಬೆಲೆ ಹೆಚ್ಚಳ ಮಾಡುವುದಾಗಿ ತಿಳಿಸಿವೆ. ಸರಕುಗಳ ಬೆಲೆ ಏರಿಕೆ, ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತ, ಹಣದುಬ್ಬರ ಮತ್ತು ಇತರ ಕಾರಣಗಳಿಂದಾಗಿ ವೆಚ್ಚ ನಿರಂತರ ಹೆಚ್ಚಳವಾಗಿದೆ. ಇದನ್ನು ಭಾಗಶಃ ಸರಿದೂಗಿಸುವುದಕ್ಕಾಗಿ ಬೆಲೆ ಹೆಚ್ಚಳ ಮಾಡಲಾಗುವುದು ಎಂದು ರೆನಾಲ್ಟ್ ಹೇಳಿತ್ತು. ಜನವರಿಯಿಂದ ಕಾರುಗಳ ಬೆಲೆಯಲ್ಲಿ ಶೇಕಡಾ 1.7ರಷ್ಟು ಹೆಚ್ಚಳ ಮಾಡುವುದಾಗಿ ಆಡಿ ಇಂಡಿಯಾ ಇತ್ತೀಚೆಗೆ ತಿಳಿಸಿತ್ತು.

ಕಿಯಾ ಇಂಡಿಯಾ ಕೂಡ ಮುಂದಿನ ತಿಂಗಳಿನಿಂದ ಕಾರಿನ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಆದರೆ ಎಷ್ಟು ಹೆಚ್ಚಳ ಮಾಡಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ವಿವಿಧ ಮಾದರಿಗಳ ಕಾರುಗಳ ಮೇಲೆ ಸುಮಾರು 50,000 ರೂ. ವರೆಗೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಮರ್ಸಿಡಿಸ್ ಬೆಂಜ್ ಜನವರಿಯಿಂದ ಕಾರುಗಳ ಬೆಲೆಯಲ್ಲಿ ಶೇಕಡಾ 5ರಷ್ಟು ಹೆಚ್ಚಳ ಮಾಡುವುದಾಗಿ ತಿಳಿಸಿದೆ. ವೆಚ್ಚ ಹೆಚ್ಚಾಗಿರುವುದರಿಂದ ಇದರಲ್ಲಿ ತುಸು ಪಾಲನ್ನು ಗ್ರಾಹಕರಿಗೆ ವರ್ಗಾಯಿಸದೆ ಬೇರೆ ಆಯ್ಕೆಗಳಿಲ್ಲ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ಸಿಇಒ ಮಾರ್ಟಿನ್ ಶ್ವೆಂಕ್ ಇತ್ತೀಚೆಗೆ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here