Home Uncategorized Tech Tips: ಗೂಗಲ್​ನಲ್ಲಿ ನಿಮ್ಮ ಫೋಟೋ ಕಾಣಿಸಬೇಕೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

Tech Tips: ಗೂಗಲ್​ನಲ್ಲಿ ನಿಮ್ಮ ಫೋಟೋ ಕಾಣಿಸಬೇಕೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

48
0

ಸರ್ಚ್ ಎಂಜಿನ್ ದೈತ್ಯ ಗೂಗಲ್ ನಮಗೆ ಏನೇ ಬೇಕಿದ್ದರೂ, ಯಾವುದೇ ವಿಷಯದ ಬಗ್ಗೆ ಗೊಂದಲವಿದ್ದರೂ ಥಟ್ ಅಂತ ಸರ್ಚ್​ ಮಾಡಿದರೆ ಉತ್ತರ ಹುಡುಕಿ ಕೊಡುತ್ತೆ. ಕ್ರಿಕೆಟರ್ಸ್, ಹೀರೋ, ಹೀರೋಯಿನ್​​ಗಳ ಅಥವಾ ಯಾವುದೇ ಸೆಲೆಬ್ರಿಟಗಳ ಹೆಸರು ಹಾಕಿ ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಕ್ಷಣಾರ್ಧದಲ್ಲಿ ಅವರ ಫೋಟೋ ಒಂದರ ಹಿಂದೆ ಒಂದರಂತೆ ಬಂದು ಬೀಳುತ್ತದೆ. ಆದರೆ, ನಮ್ಮ ಹೆಸರು ಹಾಕಿದರೆ ಒಂದು ಫೋಟೋ ಕೂಡ ಅಲ್ಲಿ ಕಾಣಿಸುವುದಿಲ್ಲ. ಹಾಗಾದ್ರೆ ಗೂಗಲ್​ನಲ್ಲಿ ನಮ್ಮ ಹೆಸರು ಹಾಕಿ ಸರ್ಚ್ ಮಾಡಿದರೆ ನಮ್ಮ ಫೋಟೋ ಕಾಣುವಂತೆ ಮಾಡಲಾಗುತ್ತದಾ?, ಅದು ಹೇಗೆ?. ನಿಮ್ಮ ಫೋಟೋ ಗೂಗಲ್​ ಸರ್ಚ್​ನಲ್ಲಿ ಬರಬೇಕು ಎಂದಾದರೆ ಅದಕ್ಕೊಂದು ಟ್ರಿಕ್ಸ್ ಇದೆ. ಅನೇಕರಿಗೆ ನನ್ನ ಹೆಸರು ಸರ್ಚ್ ಮಾಡಿದರೆ ಫೋಟೋ ಗೂಗಲ್​ನಲ್ಲಿ ಕಾಣಿಸಬೇಕು ಎಂಬ ಆಸೆ ಇರುತ್ತದೆ. ಅಂತವರಿಗೆ ಇದು ಸಹಕಾರಿ ಆಗಲಿದೆ.

ಗೂಗಲ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಿದರೆ ನಿಮ್ಮ ಫೋಟೋ ಕಾಣಿಸಿಕೊಳ್ಳಬೇಕು ಎಂದರೆ ನೀವು ಮೊದಲು ಫೋಟೋಥಿಂಗ್ (Photothing) ಎಂಬ ವೆಬ್‌ಸೈಟ್​ಗೆ ಹೋಗಬೇಕು. ಈ ವೆಬ್‌ಸೈಟ್ ತೆರೆದು ನಿಮ್ಮ ಭಾವಚಿತ್ರವನ್ನು ಇದರಲ್ಲಿ ಗೂಗಲ್‌ಗೆ ‘ಆಡ್’ ಮಾಡಿದರೆ, ಗೂಗಲ್‌ನಲ್ಲಿ ನೀವು ಅಪ್‌ಲೋಡ್ ಮಾಡಿದ ಫೊಟೋ ಕಾಣಿಸಿಕೊಳ್ಳುತ್ತದೆ. ಆದರೆ, ಇದಕ್ಕೂ ಮುನ್ನ ನೀವು ಕೆಲ ಕೆಲಸಗಳನ್ನು ಮಾಡಬೇಕು. ಮೊದಲಿಗೆ ಈ ವೆಬ್‌ಸೈಟ್‌ಗೆ ನೀವು ರಿಜಿಸ್ಟರ್ ಆಗಬೇಕು. ನಿಮ್ಮ ಇ ಮೇಲ್ ಅಡ್ರೆಸ್ ಅನ್ನು ನೀಡಿ ವೆಬ್‌ಸೈಟ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿದ ನಂತರ ಕೆಳಗೆ “JOIN” ಎಂಬ ಆಯ್ಕೆ ಕಾಣಿಸುತ್ತದೆ, ಅದನ್ನು ಒತ್ತಿ ಅಕೌಂಟ್ ಕ್ರಿಯೇಟ್ ಮಾಡಿ.

Black Friday Sale: ಕೇವಲ 7999 ರೂ. ಗೆ ನಥಿಂಗ್ ಫೋನ್ (1) ಖರೀದಿಸಿ: ಇಲ್ಲಿದೆ ನೋಡಿ ಟ್ರಿಕ್

ಲಾಗಿನ್ ಆದ ನಂತರ ವೆಬ್‌ಸೈಟ್ ಹೋಮ್‌ ಪೇಜ್ ತೆರೆಯುತ್ತದೆ. ಅಲ್ಲಿ ಹೋಮ್ ಬಟನ್ ಪಕ್ಕದಲ್ಲಿ ಕಾಣಿಸುವ ಅಪ್‌ಲೋಡ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ “ಚೂಸ್ ಪೈಲ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಬಳಿ ಇರುವ ಅಂದಾವಾದ ಪೋಟೋವನ್ನು ಸೆಲೆಕ್ಟ್ ಮಾಡಿಕೊಂಡು ‘ಓಪನ್’ ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಪೋಟೋ ವೆಬ್‌ಸೈಟ್ ಸೇರುತ್ತದೆ.

ಈ ಅಲ್ಲೇ ಕೆಳಗೆ ಟ್ಯಾಗ್ಸ್ ಎಂಬ ಕಾಲಮ್ ಇರುತ್ತದೆ. ಆ ಕಾಲಮ್ ಬಹಳ ಮುಖ್ಯವಾಗಿದ್ದು, ಅದರಲ್ಲಿ ನೀವು ಗೂಗಲ್‌ನಲ್ಲಿ ಹುಡುಕುವ ಹೆಸರುಗಳಲ್ಲಿ ( 3 ರಿಂದ 4 ಇರಲಿ) ಸೇರಿಸಿ. ಜೊತೆಗೆ ಅಲ್ಲಿರುವ ಡಿಸ್ಕ್ರಿಪ್ಷನ್ ಟೈಪ್ ಮಾಡಿ ಫೋಟೋ ಅಪ್‌ಲೋಡ್ ಮಾಡಿ. ನಂತರ ಟ್ಯಾಗ್ಸ್ ಕಾಲಮ್‌ನಲ್ಲಿ ನೀವು ನೀಡಿದ ಹೆಸರುಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ನಿಮ್ಮ ಪೋಟೋ ಕಾಣಿಸಿಕೊಳ್ಳುತ್ತದೆ.

Tech Tips: ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಹೀಗೆ ಮಾಡಲು ಮರೆಯದಿರಿ

ಅಂತೆಯೆ ಫೇಸ್​ಬುಕ್ ಮೂಲಕವೂ ಗೂಗಲ್​ನಲ್ಲಿ ನಿಮ್ಮ ಫೋಟೋ ಕಾಣಿಸುವಂತೆ ಮಾಡಬಹುದು ಎಂದರೆ ನಂಬಲೇಬೇಕು. ಹೌದು, ಇದಕ್ಕಾಗಿ ನೀವು ಎಫ್​ಬಿಗೆ ಫೋಟೋ ಹಂಚಿಕೊಳ್ಳುವಾಗ ಕೆಲ ಟ್ರಿಕ್​ಗಳನ್ನು ಫಾಲೋ ಮಾಡಿದರೆ ಸಾಕು. ನಾವು ಫೋಟೋ ಅಪ್ಲೋಡ್ ಮಾಡಬೇಕಾದರೆ, ಫೋಟೋಗಳಿಗೆ ಸರಿಯಾದ ಹೆಸರು ನೀಡಬೇಕು, ಉದಾಹರಣೆಗೆ ಫೋಟೋ ಹೆಸರು photo1.jpg, ಇದ್ದಾಗ ಇದರಿಂದ ಯಾವುದೇ ಉಪಯೋಗವಿಲ್ಲ. ಬದಲಾಗಿ ನಿಮ್ಮ ಹೆಸರು ರಾಜೇಶ್ ಎಂದಿದ್ದರೆ, ನಿಮ್ಮ ಫೋಟೋಗೆ Rajesh- shivamogga.jpg ಎಂದು ಹೆಸರು ನೀಡಿ ಅಪ್​ಲೋಡ್ ಮಾಡಬೇಕು. ಇದು ಎರಡು ದಿನಗಳ ಒಳಗೆ ಅಪ್ಡೇಟ್ ಆಗಿ ಗೂಗಲ್​ನಲ್ಲಿ ಕಾಣಸಿಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here