ಯೂಸರ್ ಫ್ರೆಂಡ್ಲಿ ಅಪ್ಡೇಟ್ ಪರಿಚಯಿಸಿ ಬಳಕೆದಾರರ ಮನಗೆದ್ದಿರುವ ವಾಟ್ಸ್ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಪ್ರತಿ ವರ್ಷವೂ ವಾಟ್ಸ್ಆ್ಯಪ್ ಹೊಸ ಹೊಸ ಫೀಚರ್‌ಗಳನ್ನು (WhatsApp Features) ದೇಶದಲ್ಲಿ ಬಳಕೆದಾರರಿಗೆ ನೀಡುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ದೇಶದ ನೆಚ್ಚಿನ ಚಾಟ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿರುವ ವಾಟ್ಸ್ಆ್ಯಪ್ ಭಾರತದ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ, ಮಲಯಾಳಂ ಜೊತೆಗೆ ಕನ್ನಡ (Kannada) ಭಾಷೆಗಳನ್ನ ಕೂಡ ಬೆಂಬಲಿಸುತ್ತದೆ. ಹಾಗಾದ್ರೆ ವಾಟ್ಸ್ಆ್ಯಪ್ನಲ್ಲಿ (WhatsApp Language) ಕನ್ನಡ ಭಾಷೆಗಳನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.
ಕನ್ನಡ ಭಾಷೆಗಳಲ್ಲಿ ವಾಟ್ಸ್ಆ್ಯಪ್ ಬಳಸುವುದು ಹೇಗೆ?:
ವಾಟ್ಸ್ಆ್ಯಪ್ ತೆರೆಯಿರಿ
ಮೆನು ಬಟನ್ ಟ್ಯಾಪ್ ಮಾಡಿ
ಸೆಟ್ಟಿಂಗ್‌ಗಳಿಗೆ ಹೋಗಿ
ಚಾಟ್‌ಗೆ ಹೋಗಿ ಮತ್ತು ಅಪ್ಲಿಕೇಶನ್ ಭಾಷೆಯನ್ನು ತೆರೆಯಿರಿ
ಕಾಣಿಸಿಕೊಳ್ಳುವ ಪಾಪ್‌ಅಪ್‌ನ ಕೆಳಗಡೆ ಕನ್ನಡ ಆಯ್ಕೆಯ ಭಾಷೆಯನ್ನು ಆರಿಸಿ
Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ
ಹೀಗೆ ಆಯ್ಕೆ ಮಾಡುವುದರಿಂದ ಕನ್ನಡ ಭಾಷೆಗಳಲ್ಲಿ ವಾಟ್ಸ್ಆ್ಯಪ್ ಅನ್ನು ಬಳಸಬಹುದಾಗಿದೆ. ಆದರೂ ಬಳಕೆದಾರರು ಸಾಮಾನ್ಯ ನಿಯಮವನ್ನ ಮೊದಲು ಗಮನಿಸಬೇಕಾಗುತ್ತದೆ. ಮೊದಲಿಗೆ ವಾಟ್ಸ್ಆ್ಯಪ್ ಫೋನ್‌ನ ಭಾಷೆಯನ್ನು ಅನುಸರಿಸುತ್ತದೆ. ಉದಾಹರಣೆಗೆ, ನಿಮ್ಮ ಫೋನ್‌ನ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿದರೆ, ವಾಟ್ಸ್ಆ್ಯಪ್ ಸ್ವಯಂಚಾಲಿತವಾಗಿ ಕನ್ನಡದಲ್ಲಿರುತ್ತದೆ. ಆದಾಗ್ಯೂ, ನಿಮ್ಮ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ ಅಥವಾ ಐಒಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಅವಲಂಬಿಸಿ ನೀವು ಸ್ವಲ್ಪ ವಿಭಿನ್ನ ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಆಂಡ್ರಾಯ್ಡ್‌ನಲ್ಲಿ ವಾಟ್ಸ್ಆ್ಯಪ್ ಭಾಷೆ ಸೆಟ್ ಮಾಡುವುದು ಹೇಗೆ?
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ
‘ಭಾಷೆಗಳು ಮತ್ತು ಇನ್‌ಪುಟ್’ ಟ್ಯಾಪ್ ಮಾಡಿ
ಮುಕ್ತ ಭಾಷೆಗಳು
ನೀವು ಆಯ್ಕೆ ಮಾಡಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ
ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಆ ಭಾಷೆಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪಠ್ಯವನ್ನು ಹುಡುಕಿ
ಆ್ಯಪಲ್ ಐಫೋನ್‌ನಲ್ಲಿ ಹೇಗೆ?:
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ
ಟ್ಯಾಪ್ ಆನ್ ಜನರಲ್
ಭಾಷೆ ಮತ್ತು ಪ್ರದೇಶಕ್ಕೆ ಹೋಗಿ
ಐಫೋನ್ ಭಾಷೆಯನ್ನು ಆಯ್ಕೆಮಾಡಿ
ನೀವು ಆಯ್ಕೆ ಮಾಡಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ
ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಆ ಭಾಷೆಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪಠ್ಯವನ್ನು ಹುಡುಕಿದರೆ ಆಯಿತು
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ