ವಿಜಯಪುರ, ಎ.13: ಕಾರು ಮತ್ತು ಸಿಮೆಂಟ್ ಸಾಗಾಟದ ಲಾರಿ ಮಧ್ಯೆ ಅಪಘಾತ ಸಂಭವಿಸಿ ಬಾಲಕ ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ (40), ಮೇಘರಾಜ ರಜಪೂತ (12) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವಿಜಯಪುರ ನಿವಾಸಿಗಳೆಂದು ತಿಳಿದುಬಂದಿದೆ.
ಕಾರಿನಲ್ಲಿದ್ದವರು ವಿಜಯಪುರದಿಂದ ಜಮಖಂಡಿಗೆ ಹೊರಟಿದ್ದರೆನ್ನಲಾಗಿದೆ. ಇವರು ಸಂಚರಿಸುತ್ತಿದ್ದ ಕಾರು ಅರ್ಜುಣಗಿ ಗ್ರಾಮದ ಬಳಿ ತಲುಪಿದಾಗ ಜಮಖಂಡಿ ಕಡೆಯಿಂದ ವಿಜಯಪುರಕ್ಕೆ ಬರುತ್ತಿದ್ದ ಸಿಮೆಂಟ್ ಸಾಗಾಟದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.