ಹುಬ್ಬಳ್ಳಿ:
ಕಾಂಗ್ರೆಸ್ ಮನೆಯೊಂದು ನಾಲ್ಕು ಬಾಗಿಲು ಆಗಿದೆ. ಜನವರಿ, ಫೆಬ್ರವರಿ ವೇಳೆಗೆ ಸರ್ಕಾರ ಏನಾದ್ರೂ ಅಚ್ಚರಿ ಇಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾಣದ ಅಲ್ಲೋಲ ಕಲ್ಲೋಲ ಆಗ್ತಿದೆ. ಇದನ್ನು ಸ್ವತಃ ಕಾಂಗ್ರೆಸ್ ಶಾಸಕರು ನೀರಿಕ್ಷೆ ಮಾಡಿರಲಿಲ್ಲ, 135 ಜನ ಇದ್ರೂ ನಿಮ್ಮ ತಳ ಅಲುಗಾಡ್ತಿದ್ದು, ಇದಕ್ಕೆ ಕಾಂಗ್ರೆಸ್ ವಕ್ತಾರರು ಮಾತಾಡಬೇಕು, ಬಿಜೆಪಿ ಲೀಡರ್ ಲೆಸ್ ಪಾರ್ಟಿ ಅಂತಾರೆ ನಿಮ್ಮ ಪಕ್ಷದ ಬಗ್ಗೆ ಮಾತಾಡಿ ” ಎಂದರು.
ಇನ್ನು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಕ್ತಾರರು ಆಗಿದ್ದು, ಕಾಂಗ್ರೆಸ್‌ನಲ್ಲಿ ನಾಲ್ಕು ಬಾಗಿಲು ಆಗಿ ಬಿಟ್ಟಿವೆ, ಕಾಂಗ್ರೆಸ್‌ನಲ್ಲಿ ಮೊದಲು ಒಂದು ಬಣ, ಎರಡು ಬಣ ಇದೀಗ ನಾಲ್ಕು ಬಣ ಆಗಿವೆ. ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಮೈಮೆಲೆ ಎಳೆದುಕೊಳ್ತಿದೆ. ಬಿಜೆಪಿ ರಚಾನತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡ್ತಿದೆ, ಬಿಜೆಪಿ ಆಪರೇಶನ್ ಕಮಲ ಮಾಡ್ತಿಲ್ಲ, ಒಳಜಗಳ ಮುಚ್ಚಿ ಹಾಕಲು ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾತಾಡ್ತಿದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ರು, ಆದ್ರೆ ಸಿದ್ದರಾಮಯ್ಯ ಬಿಟ್ಟು ಕೊಡ್ತಿಲ್ಲ, ಸಿದ್ದರಾಮಯ್ಯರನ್ನ ಕೆಳಗಿಳಿಸಿ ಸಿಎಂ ಆಗಬೇಕು ಎಂದು ಹೋರಾಡುತ್ತಿದ್ದಾರೆ. ಒಮ್ಮೆ ಸಿದ್ದರಾಮಯ್ಯ ಬಣದವರು ಮಾತನಾಡಿದ್ರೆ, ಇನ್ನೊಮ್ಮೆ ಡಿಕೆಶಿ ಬಣದವರು ಮಾತನಾಡುತ್ತಿದ್ದಾರೆ, ಅನೇಕ ಕಾಂಗ್ರೆಸ್ ಶಾಸಕರು ಬಿಜೆಪಿ ಚಲೋ ಅಂತಿದ್ದಾರೆ ಎಂದು ಹೇಳಿದರು.