ಬೆಂಗಳೂರು:
ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 15 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಕೇರಳದ ಕ್ಯಾಲಿಕೆಟ್ ಜಿಲ್ಲೆಯ ರಮೀಶ್ (28), ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿಗಳಾದ ಅಶೀರ್ ಎಂ.ಸಿ. (32) ಹಾಗೂ ಶಾಝಿನ್ (19) ಬಂಧಿತ ಆರೋಪಿಗಳು.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊರೀಜ್ ರೆಸ್ಟೋರೆಂಟ್ ಎದುರಿನ ನೀಲಾದ್ರೀ ನಗರ ಮುಖ್ಯ ರಸ್ತೆಯಲ್ಲಿ ಜನವರಿ 4ರಂದು ಮಾದಕ ವಸ್ತು ಎಂಡಿಎಂಎ ಮತ್ತು ಹ್ಯಾಶಿಸ್ ಆಯಿಲ್ ಅನ್ನು ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡಲು ಬಂದಿದ್ದ ಕೇರಳ ಮೂಲದ 3 ಜನ ಅಸಾಮಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. UNI