
Tight security for Suvarna Vidhana Soudha: Speaker UT Khader
ಬೆಳಗಾವಿ:
ಹೊಸ ಸಂಸತ್ ಭವನದಲ್ಲಿ ನಡೆದಿರುವ ಭದ್ರತಾ ಲೋಪದ ಬೆನ್ನಲ್ಲೆ ಸುವರ್ಣ ವಿಧಾನಸೌಧಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಬೇಕು.
ಯಾರೇ ವಿಧಾನಸೌಧಕ್ಕೆ ಬಂದರೂ ಸೂಕ್ತ ಪರಿಶೀಲನೆ ನಡೆಸಿ ಒಳಗೆ ಬಿಡಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಂಸತ್ ಭವನದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯ ಮಾರ್ಷಲ್, ಬೆಳಗಾವಿ ನಗರ ಪೊಲೀಸ್ ಆಯುಕ್ತ, ಬೆಳಗಾವಿ ಗ್ರಾಮಾಂತರ ಎಸ್ಪಿ, ಗುಪ್ತಚರ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಯು.ಟಿ.ಖಾದರ್, ‘ವಿಧಾನಸಭೆ ಸಭಾಂಗಣಕ್ಕೆ ಕಲ್ಪಿಸಿರುವ ಭದ್ರತೆ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅಲ್ಲದೆ, ಯಾವುದೆ ಕಾರಣಕ್ಕೂ ಅಧಿವೇಶನ ನಡೆಯುವ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.