Home ಕೋಲಾರ Tomato price drop: ಇಗ ಕೋಲಾರ ಮಾರುಕಟ್ಟೆಯಲ್ಲಿ ಕೆಜಿಗೆ 6-16 ರೂ.ಗೆ ಮಾರಾಟ

Tomato price drop: ಇಗ ಕೋಲಾರ ಮಾರುಕಟ್ಟೆಯಲ್ಲಿ ಕೆಜಿಗೆ 6-16 ರೂ.ಗೆ ಮಾರಾಟ

36
0
Couple arrested in connection with tomato robbery
Couple arrested in connection with tomato robbery

ಕೋಲಾರ:

ಏಷ್ಯಾದಲ್ಲಿಯೇ ಟೊಮೇಟೊಗಳಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾರಾಟವಾಗುತ್ತಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದ ಟೊಮೇಟೊ ಬೆಲೆ ಇದೀಗ ಕುಸಿತವಾಗಿದ್ದು, ಕೋಲಾರ ಮಾರುಕಟ್ಟೆಯಲ್ಲಿ ಟೊಮೇಟೊ 6 ರಿಂದ 16 ಕೆಜಿಗೆ ಮಾರಾಟವಾಗುತ್ತಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜುಲೈ ಮೊದಲ ವಾರದಲ್ಲಿ 15 ಕೆಜಿ ಟೊಮೇಟೊ ಇರುವ ಕ್ರೇಟ್ 2,400 ರೂ.ಗೆ ಮಾರಾಟವಾಗಿದ್ದು, ಇದೀಗ 100-240 ರೂ.ಗೆ (ಕೆಜಿಗೆ 6-16 ರೂ.) ಇಳಿದಿದೆ. ಗ್ರಾಹಕರಿಗೆ ಸಂತಸ ಎನಿಸಿದರೂ, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಜೊತೆಗೆ ಮಾತನಾಡಿ, ಜಿಲ್ಲೆಯಲ್ಲಿ ಟೊಮೇಟೊ ಆಗಮನ ಹೆಚ್ಚಾಗಿದೆ. ಸದ್ಯ 8,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಇನ್ನೂ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಬೆಳೆಯಲಾಗುತ್ತಿದೆ ಎಂದು ಅವರು ಹೇಳಿದರು.

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಎರಡು ತಿಂಗಳ ಹಿಂದೆ ಮಾರುಕಟ್ಟೆಗೆ ದಿನಕ್ಕೆ 60 ರಿಂದ 70 ಸಾವಿರ ಬಾಕ್ಸ್ ಟೊಮೇಟೊ ಬರುತ್ತಿದ್ದು, ಭಾನುವಾರ 1,18,974 ಬಾಕ್ಸ್ ಟೊಮೇಟೊ ಬಂದಿದೆ. ಪ್ರತಿ ಕ್ರೇಟ್‌ಗೆ 100-240 ರೂ.ಗೆ ಮಾರಾಟವಾಗಿದೆ ಎಂದರು.

ಶ್ರೀನಿವಾಸಪುರದ ಯುವ ರೈತ ಸುದರ್ಶನ್ ಮಾತನಾಡಿ, ಮಳೆ ಕೊರತೆ ಹಾಗೂ ಬಿಸಿಲಿನ ಬೇಗೆಯಿಂದ ಟೊಮೇಟೊ ನಾಲ್ಕೈದು ದಿನವೂ ಬಾಳಿಕೆ ಬರುವುದಿಲ್ಲ ಮತ್ತು ವ್ಯಾಪಾರಸ್ಥರು ಆಸಕ್ತಿ ತೋರುತ್ತಿಲ್ಲ. ಆದರೆ, ಉತ್ತಮ ಮಳೆಯಿಂದಾಗಿ ಸುಮಾರು ಒಂದು ವಾರದಿಂದ ಟೊಮೇಟೊ ಬೆಳೆಗಳು ಕೈಗೆ ಬರುತ್ತಿವೆ. ಇದೂ ಕೂಡ ಬೆಲೆ ಕುಸಿತಕ್ಕೆ ಒಂದು ಕಾರಣ ಎಂದು ತಿಳಿಸಿದರು.

ಮತ್ತೋರ್ವ ರೈತ ಮುರಳಿ ಮಾತನಾಡಿ, ಗರಿಷ್ಠ ಬೆಲೆ ಇರುವ ಸಂದರ್ಭದಲ್ಲಿ ಬಹುತೇಕ ರೈತರ ಟೊಮೇಟೊ ಬೆಳೆಗೆ ಎಲೆ ಸುರುಳಿ ರೋಗ ಹಾಗೂ ಬಿಳಿ ನೊಣ ರೋಗ ಬಾಧಿಸಿದ್ದು, ಶೇ 50ರಷ್ಟು ಬೆಳೆ ಹಾನಿಯಾಗಿದ್ದರಿಂದ ಪ್ರಯೋಜನವಾಗಿಲ್ಲ ಎಂದರು.

LEAVE A REPLY

Please enter your comment!
Please enter your name here