ಬೆಂಗಳೂರು:
ಸಭಾಪತಿ ಧರ್ಮೇಗೌಡ ಅವರ ನಿಧನದಿಂದ ತೆರವಾಗಿರುವ ಮೇಲ್ಮನೆಯ ಸ್ಥಾನಕ್ಕೆ ಬಿಜೆಪಿ ತುಳಸಿ ಮುನಿರಾಜುಗೌಡ ಹೆಸರನ್ನು ಅಖೈರುಗೊಳಿಸಿದೆ.
ವಿಧಾನಪರಿಷತ್ ಉಪಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಮುನಿರಾಜು ಗೌಡ ಪಿ. ಎಂ ಅವರಿಗೆ ಅಭಿನಂದನೆಗಳು. pic.twitter.com/wlEYC3knJ0
— BJP Karnataka (@BJP4Karnataka) March 2, 2021
ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಹೇಳಿದ್ದ ಬಿಜೆಪಿ ನಾಯಕರು ಅದರಂತೀಗ ಮಾತು ಉಳಿಸಿಕೊಂಡಿದ್ದಾರೆ.ಅಷ್ಟಕ್ಕೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಆರ್.ಆರ್.ನಗರದ ಉಪಚುನಾವಣೆಯಲ್ಲಿ ಬಿಜೆಪಿ ಮುನಿರತ್ನಂಗೆ ಟಿಕೆಟ್ ನೀಡಿದ್ದಾಗ ತುಳಸಿ ಮುನಿರಾಜುಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು.ಅಲ್ಲದೇ ಉಪಚುನಾವಣೆಗೆ ಬಿಜೆಪಿಯಿಂದ ಆಕಾಂಕ್ಷಿಯಾಗಿದ್ದ ಹಾಗೂ ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮುನಿರತ್ನಂ ಎದುರು ತುಳಸಿಮುನಿರಾಜುಗೌಡ ಪರಾಜಯಗೊಂಡಿದ್ದರು. ಉಪಚುನಾವಣೆಗೆ ಮುನಿರತ್ನಂಗೆ ಬೆಂಬಲಿಸಿದಲ್ಲಿ ಪಕ್ಷ ಕೈಬಿಡುವುದಿಲ್ಲ ಎಂಬ ಭರವಸೆಯನ್ನು ಮುನಿರಾಜುಗೌಡಗೆ ನೀಡಿತ್ತು.