
Tumkur: Four people drowned in Siddaganga Mutt Gokatte
ತುಮಕೂರು:
ಕೈಕಾಲು ತೊಳೆಯಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ನಡೆದಿದೆ.
ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಗೋಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ 11 ವರ್ಷದ ಶಂಕರ್ ಮತ್ತು ರಕ್ಷಿತ್ ಮುಳುಗಿದ್ದಾರೆ. ಈ ವೇಳೆ ಜೊತೆಯಲ್ಲಿ ಇದ್ದ ಲಕ್ಷ್ಮಿ ಎಂಬುವರು ರಕ್ಷಿಸಲು ಹೋಗಿ ಮುಳುಗಿದ್ದು ಇದನ್ನು ಕಂಡ ಸ್ಥಳೀಯ ವ್ಯಕ್ತಿ ವರ್ಷದ ಮಹಾದೇವಪ್ಪ ಎಂಬುವರು ಸಹ ರಕ್ಷಿಸಲು ಹೋಗಿ ಅವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳಾದ ಶಂಕರ್ ಹಾಗೂ ರಕ್ಷಿತ್ ರಾಮನಗರ ನಿವಾಸಿಗಳಾಗಿದ್ದು ಲಕ್ಷ್ಮಿ ನೆಲಮಂಗಲ ಹಾಗೂ ಮಹಾದೇವಪ್ಪ ಯಾದಗಿರಿ ನಿವಾಸಿಯಾಗಿದ್ದಾರೆ. ಅದೃಷ್ಟವಶಾತ್ ನೀರಿಗೆ ಇಳಿದಿದ್ದ ರಂಜಿತ್ ಎಂಬ ಇನ್ನೊಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.