Home Uncategorized TV9 Exclusive: ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರರಾವ್​ ಸಾರಥ್ಯದ ಬಿಆರ್​ಎಸ್​​ ಪಾರ್ಟಿ ಉದ್ಘಾಟನೆ- ಹೆಚ್​ಡಿಕೆ ದಂಪತಿ...

TV9 Exclusive: ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರರಾವ್​ ಸಾರಥ್ಯದ ಬಿಆರ್​ಎಸ್​​ ಪಾರ್ಟಿ ಉದ್ಘಾಟನೆ- ಹೆಚ್​ಡಿಕೆ ದಂಪತಿ ಉಪಸ್ಥಿತಿ

27
0

ತೆಲಂಗಾಣ (Telangana) ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್​​ ರಾವ್​ (KCR) ತಮ್ಮ ಕೆಸಿಆರ್​ ಪಕ್ಷವನ್ನು ಬಿಆರ್​ಎಸ್​​ ಪಾರ್ಟಿಯನ್ನಾಗಿ (BRS Party) ಮಾರ್ಪಾಡು ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಗುರುತಿಸಿಕೊಳ್ಳುವಂತಾಗಲು ದೆಹಲಿಯ ವಸಂತವಿಹಾರ್​​​ನಲ್ಲಿ ಪಕ್ಷದ ಕಚೇರಿಯನ್ನು ಇಂದು ಉದ್ಘಾಟಿಸಿದ್ದಾರೆ.

ಇಂದು ಬುಧವಾರ ಸರಿಯಾಗಿ 12.37 ನಿಮಿಷಕ್ಕೆ ಬಿಆರ್​ಎಸ್​​ ಪಾರ್ಟಿ ಉದ್ಘಾಟನೆಗೊಂಡಿದ್ದು, ಕರ್ನಾಟಕ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (hd kumaraswamy) ಮತ್ತು ಉತ್ತರ ಪ್ರದೇಶ ಮಾಜಿ ಸಿ ಎಂ ಅಖಿಲೇಶ್ ಯಾದವ್ ಅವರುಗಳು ಸಹ ಈನ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.

ದೆಹಲಿಯಲ್ಲಿ ಬಿಆರ್‌ಎಸ್ ಪಕ್ಷದ ಕೇಂದ್ರ ಕಚೇರಿಯನ್ನು ಆರಂಭಿಸುವ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿದ ಸಿಎಂ ಕೆ.ಸಿ.ಆರ್ ಅವರಿಗೆ ನಾನಾ ಗಣ್ಯರು, ಸಚಿವರು, ಮಾಜಿ ಸಚಿವರು ಶುಭಾಶಯ ಕೋರಿದರು. ಪೂಜಾ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ದಂಪತಿ ಭಾಗವಹಿಸಿದ್ದಾರೆ. ಬಿಆರ್‌ಎಸ್ ರಾಷ್ಟ್ರೀಯ ಅಧ್ಯಕ್ಷ, ತೆಲಂಗಾಣ ಸಿಎಂ ಕೆ.ಸಿ.ಆರ್ ಅವರು ದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯನ್ನು ಪ್ರಾರಂಭಿಸಿ ಪಕ್ಷದ ಕಡತಕ್ಕೆ ಸಹಿ ಹಾಕಿದರು.

LEAVE A REPLY

Please enter your comment!
Please enter your name here