Home Uncategorized TV9 Kannada Digital Survey ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೆ? ಯಾವ ಹಂತದಲ್ಲಿ ನೀಡಬೇಕು? ಜನಾಭಿಪ್ರಾಯ...

TV9 Kannada Digital Survey ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೆ? ಯಾವ ಹಂತದಲ್ಲಿ ನೀಡಬೇಕು? ಜನಾಭಿಪ್ರಾಯ ಇಲ್ಲಿದೆ

42
0

ಬೆಂಗಳೂರಿನ (Bengaluru) ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ (School Bag) ಕಾಂಡೋಮ್ಸ್‌, ಗರ್ಭನಿರೋಧಕಗಳು ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ ಎನ್ನುವ ಬಗ್ಗೆ ವರ್ಷಗಳಿಂದ ಚರ್ಚೆಯ ಹಂತದಲ್ಲಿಯೇ ಇದೆ. ಭಾರತೀಯ ಸಂಸ್ಕೃತಿಗೆ ಮತ್ತು ಶೈಕ್ಷಣಿಕ ಪದ್ಧತಿಗೆ ಇಂಥಾ ಶಿಕ್ಷಣ ಮಾರಕ ಎನ್ನುವುದು ಒಂದು ವರ್ಗದ ವಾದಗಿದ್ದರೆ, ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡುವುದು ಉತ್ತಮ ಎನ್ನುವುದು ಮತ್ತೊಂದು ವರ್ಗದ ತರ್ಕ. ಇನ್ನು ಈ ಬಗ್ಗೆ ನಿಮ್ಮ ಜನಪ್ರಿಯ ಸುದ್ದಿ ಮಾಧ್ಯಮ ಟಿವಿ9 ಕನ್ನಡ ಡಿಜಿಟಲ್, ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೆ? ಯಾವ ಹಂತದಲ್ಲಿ ನೀಡಬೇಕು?  ಎನ್ನುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮತ್ತು ಟ್ವಿಟ್ಟರ್​ನಲ್ಲಿ ಪೋಲ್ ಮೂಲಕ ಸಮೀಕ್ಷೆ ಮಾಡಿದ್ದು, ಇದರಲ್ಲಿ ಹಲವರು ಹಲವು ರೀತಿಯಾಗಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೆ? ಯಾವ ಹಂತದಲ್ಲಿ ನೀಡಬೇಕು? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಬಳಕೆದಾರರೂ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಶಾಲಾ ಹಂತದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಬೇಕು ಎಂದಿದ್ದರೆ, ಇನ್ನೂ ಕೆಲವರು ಈ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೆ? ಯಾವ ಹಂತದಲ್ಲಿ ನೀಡಬೇಕು? ಪೋಲ್​ಗೆ ಫೇಸ್​ಬುಕ್ 293 ಲೈಕ್ಸ್, 135 ಕಮೆಂಟ್ಸ್​ಗಳು ಬಂದಿವೆ. ಇನ್ನು ಟ್ವಿಟ್ಟರ್​ನಲ್ಲಿ 17 ಜನರು ರಿಟ್ವೀಟ್, ಮಾಡಿದ್ರೆ 446 ಜನ ಲೈಕ್​ ಮಾಡಿದ್ದು, ಬಹಳಷ್ಟು ಜನ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಹಾಗಾದ್ರೆ, ಟ್ವಿಟ್ಟರ್, ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಮ್​ನಲ್ಲಿ ಸಾರ್ವಜನಿಕರು ಏನೆಲ್ಲ ಹೇಳಿದ್ದಾರೆ ಎನ್ನುವ ಆಯ್ದ ಕೆಲ ಅಭಿಪ್ರಾಯಗಳು ಈ ಕೆಳಗಿನಂತಿವೆ ನೋಡಿ.

ನೆಟ್ಟಿಗರು ಈ ಏನೆಲ್ಲ ಹೇಳಿದ್ದಾರೆ ಎನ್ನುವುದು ಇಲ್ಲಿದೆ

* ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಡಾ ಎಕೆಂದರೆ ಅವರಿಗೆ ಲೈಂಗಕಾಸಕ್ತಿಯನ್ನು ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಆದರೆ ಪಠ್ಯ ಪಸ್ತಕದಲ್ಲಿ ನ ಆಸಕ್ತಿ ಕಡಿಮೆ ಆಗಬಹುದು. ಬೇಕಾದರೆ ಪದವಿ ಹಂತದಲ್ಲಿ ಕೊಡುವುದು ಉತ್ತಮ- ವಿನೋದ್ ಮನೋದಾರ್ ಟ್ವೀಟ್

* ಮಕ್ಕಳು ಹದಿನಾಲ್ಕು ವರುಷ ತುಂಬಿದ ನಂತರ ,ಗಂಡು ಹೆಣ್ಣು ಇವರ ನಡುವಿನ ದೈಹಿಕ ವ್ಯತ್ಯಾಸವನ್ನು ವಿವರಿಸಬೇಕು.ಸಹೋದರರ ನಡುವಿನಲ್ಲಿ ಬೆಳೆಯುವ ಸಹೋದರಿಯ ರಕ್ಷಕರಾಗಿ ಎಲ್ಲಾ ಗಂಡು ಮಕ್ಕಳು ಅರಿತಿರ ಬೇಕಾದ ಪ್ರಾಥಮಿಕ ಹಂತದ ವಿಷಯ ವಿವರಿಸಿ ಹೆಣ್ತತನಕ್ಕೆ ಗೌರವಿಸ ಬೇಕಾದ ಔಚಿತ್ಯ ಮತ್ತು ಸಮಾಜದಲ್ಲಿ ಅನ್ಯ ಹೆಣ್ಣು ಮಕ್ಕಳ ರಕ್ಷಣೆ ಕಲಿಸಬೇಕು- ಮೊಹಮ್ಮದ್ ಸಲೀಂ

* ಲೈಂಗಿಕ ಶಿಕ್ಷಣ ಮಕ್ಕಳಿಗೆ ಕೊಡಬೇಕು. ಶಿಕ್ಷಕರು Counselor/Life skills trainer ಆಗಿರಬೇಕು. ದೈಹಿಕ ಶಿಕ್ಷಕರಿಂದ ಅಲ್ಲ- ವಿಜಯೇಂದ್ರ ಕುಮಾರ್

* ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಷರತ್ ಬೇಡ… ಒಳ್ಳೆಯ ಸಂಸ್ಕಾರ ಕಲಿಸಿದರೆ ಸಾಕು ,, ಯುಕ್ತ ವಯಸ್ಸಿಗೆ ಬಂದ ನಂತರ ಎಲ್ಲವೂ ತಂತಾನೇ ತಿಳಿದುಕೊಳ್ಳುತ್ತಾರೆ- ಭರತ್ ರೆಡ್ಡಿ

* ಲೈಂಗಿಕ ಕಲಿಕೆ ಅತ್ಯಗತ್ಯ. ಅದು ಸಣ್ಣ ವಯಸ್ಸಿನಿಂದಲೇ ಮನೆಯಿಂದ ಶುರು ಆಗಿ ಆಮೇಲೆ ಪ್ರಾಥಮಿಕ ಕಲಿಕೆಯ ಹಂತದಿಂದಲೇ ಇರಬೇಕು. ಮಕ್ಕಳಿಗೆ ತಮ್ಮ ಮಯ್, ಕೆಲ ವಿಚಾರ ಕೊಳಕು ಅಂತಲೋ, ಮಾತನಾಡುವುದು ಕೇಳುವುದು ನಿಷಿದ್ಧ ಅಂತಲೋ ಮಾಡಲೇ ಬಾರದು-ಕ್ರುಶಿಕ ಎವಿ

ಫೇಸ್ಬುಕ್​ ​ಮೂಲಕ ಬಂದ ಅಭಿಪ್ರಾಯಗಳು ಈ ಕೆಳಗಿನಂತಿವೆ

* ಈಗಿನ ಮಕ್ಕಳಿಗೆ ಶಿಕ್ಷಣ ಕೊಡದಿದ್ರೂ ನಡೆಯುತ್ತೆ ಆದರೆ ಸಂಸ್ಕಾರ ಕೊಡಿ. ಸಂಸ್ಕಾರ ಒಂದಿದ್ದರೆ ಶಿಕ್ಷಣ ತಾನಾಗಿಯೇ ಒಲಿದು ಬರುತ್ತೆ ಹಾಗೆ ಲೈಂಗಿಕ ಶಿಕ್ಷಣ ಅದು ಎಲ್ಲಾ ಜೀವಿಗಳಲ್ಲಿ ಬರೋ ಹಾಗೆ ಬರುತ್ತೆ ಅದನ್ನು ಯಾವ ಹೊತ್ತಿನಲ್ಲಿ ಎಲ್ಲಿ ಹೇಗೆ ನಡೆಸಬೇಕು ಎಂಬುದು ಮನುಷ್ಯನಿಗೆ ತಿಳಿದ ವಿಷಯ. ಅದಕ್ಕೆ ಅಂತ ಪ್ರತ್ಯೇಕ ಲೈಂಗಿಕ ಶಿಕ್ಷಣ ಅವಶ್ಯಕತೆ ಇಲ್ಲ – ಪ್ರತಾಪ್ Arts

* ಕೆಲವು ಖಾಸಗಿ ಶಾಲೆಗಳಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಎನ್ನುವ ಶಿಕ್ಷಣ ನೀಡುತ್ತಾರಲ್ಲ, ಆ ರೀತಿಯಾಗಿ ಅರಿವು ಸರ್ಕಾರಿ ಶಾಲೆಯಲ್ಲಿ ಮೋಡಿಸಿದರೆ ಸಾಕು.. ಹೆಚ್ಚಿನ ಅರಿವು ಅನಾಹುತಕ್ಕೆ ಕಾರಣವಾದಿಯಿತು- ಸುಬಾನಿ ಪಿಂಜಾರ್.

* ಲೈಂಗಿಕ ಶಿಕ್ಷಣ ಕಲಿಸದೆ ಹೈಸ್ಕೂಲಿನಿಂದ ಆಗಬಾರದ ಅನಾಹುತಗಳು ನಡೆಯುತ್ತಿವೆ. ಕೊನೆಗೆ ಲೈಂಗಿಕ ಶಿಕ್ಷಣದ ಬಗ್ಗೆ ಪ್ರಾಕ್ಟಿಕಲ್ ಎಕ್ಸ್ಪೀರಿಯನ್ಸ್ ಮಾಡಲು ಹೋಗಿ ಇನ್ನೂ ಇಲ್ಲದ ಅನಾಹುತಗಳು ನಡೆಯುತ್ತವೆ. ಸಾಮಾನ್ಯವಾಗಿ ಪರಾಗಸ್ಪರ್ಶ ಎಂಬುದರ ಬಗ್ಗೆ ಪಾಠ ಈಗ ಇರುವುದು ಸಾಕು. ಇದರಿಂದ ಮಕ್ಕಳಿಗೆ ಅರ್ಥಮಾಡಿಕೊಳ್ಳುವ ಚೈತನ್ಯ ಇದೆ. ಹಾಗೂ ಪರಾಗಸ್ಪರ್ಶದಿಂದ ಕೃಷಿಯಲ್ಲಿ ಎಷ್ಟು ಅನುಕೂಲ ಇದೆ ಎಂಬುದು ಕೂಡ ಗೊತ್ತಾಗುತ್ತದೆ. ಅದು ಬಿಟ್ಟು ಲೈಂಗಿಕ ಶಿಕ್ಷಣವನ್ನು ಹೇಳಿಕೊಡುವ ಅಗತ್ಯತೆ ಏನು. ಸಾವಿರಾರು ವರ್ಷದಿಂದ ಲೈಂಗಿಕ ಶಿಕ್ಷಣ ಇಲ್ಲದೆ ಪ್ರಪಂಚದ ಜನಸಂಖ್ಯೆ 800 ಕೋಟಿಗೂ ಅಧಿಕ ಆಗಿದೆ. ಅದನ್ನು ದ್ವಿಗುಣಗೊಳಿಸಬೇಕೆಂದು ನಿಮ್ಮ ಇಚ್ಚೆಯೇ. ಕೊನೆಗೆ ರಾಮ ಸೀತೆ ಜನಿಸಿದ ಈ ದೇಶದಲ್ಲಿ ಹುಡುಕಿದರೂ ಒಬ್ಬ ರಾಮನು ಒಬ್ಬ ಸೀತೆಯು ಸಿಗಲಾರದಂತ ದುಸ್ಥಿತಿ ಎದುರಾಗಬೇಕೆ- ರವಿ ಶಂಕರ್

* ನಮ್ಮ ದೇಶ ಕೃಷಿ ಆಧಾರಿತ ದೇಶವಾಗಿರುವುದರಿಂದ ನಮ್ಮ ದೇಶದ ಮಕ್ಕಳಿಗೆ ಮೊದಲು ಕೃಷಿಯ ಬಗ್ಗೆ ಅದ್ಭುತವಾದ ಶಿಕ್ಷಣವನ್ನು ನೀಡಬೇಕು ಕೊನೆ ಪಕ್ಷ 30% ಮಕ್ಕಳಾದರೂ ಕೃಷಿಯ ಬಗ್ಗೆ ಒಲವು ತೋರುವಂತೆ ಶಿಕ್ಷಣವನ್ನು ನೀಡಬೇಕು- ನಾಗಭೂಷಣ ಎಸ್​.ಆರ್.

* ಪದವಿ ಮೊದಲ ಹಂತದಲ್ಲಿ ಬೇಕು..ಏಕೆಂದರೆ ವಿವೇಚನ ಭಾವ ಆ ಸಮಯದಲ್ಲಿ ಹುಟ್ಟಿರುತ್ತದೆ..ನಾವು ಪ್ರೌಡಾ ವ್ಯವಸ್ಥೆಯಲ್ಲಿ ಲೈಂಗಿಕ ಶಿಕ್ಷಣವನ್ನು ಕೊಟ್ಟರೆ ಅದು ಪ್ರಚೋದನೆ ಕೊಟ್ಟಂಗಾಗುತ್ತೆ- ಕಲ್ಲನಗೌಡ ಪಾಟೀಲ್

ಇನ್ಸ್​ಟಾಗ್ರಾಮ್​ ಮೂಲಕ ಬಂದ ಅಭಿಪ್ರಾಯಗಳು

* ನನ್ನ ಪ್ರಕಾರ ಚಿಕ್ಕ ಮಕ್ಕಳಿಗೆ ಲೈಂಗಿಕ ಶಿಕ್ಷಣಕಿಂತ ಅವರಿಗೆ ಒಳ್ಳಿತ್ತು ಮತ್ತು ಕೆಡುಕುಗಳ ಬೇಗೆ ತಿಳಿಸುವುದು ಅಗತ್ಯ . ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ ಅಂತ ಅನ್ನಿಸುತ್ತಿದೆ- ಪರಿಮಳ

* ಕೊಡದೇ ಇದ್ದರೂ ಪರವಾಗಿಲ್ಲ, ಅವರೇ ಚೆನ್ನಾಗಿ ಕಲಿಯುತ್ತಾರೆ- ಮಹಾದೇವ ಪ್ರಸಾದ್.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here