ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಭಾರತದ ಕರೆನ್ಸಿ 10 ಲಕ್ಷ ರೂ ಹಣ ಕೊಟ್ಟರೆ ಒಂದು ಕೋಟಿ ಅಮೆರಿಕನ್ ಡಾಲರ್ ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ
ಬೆಂಗಳೂರು:
ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿ ನಕಲಿ ವಿದೇಶಿ ಹಣದ ದಂಧೆ ನಡೆಸುತ್ತಿದ್ದ ಇಬ್ಬರು ಕ್ಯಾಮರೂನ್ ದೇಶದ ಪ್ರಜೆಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ಸುಮಾರು 80 ಲಕ್ಷ ಬೆಲೆ ಬಾಳುವ ನಕಲಿ ಅಮೆರಿಕನ್ ಡಾಲರ್ ಹಣ ವಶಪಡಿಸಿದ್ದಾರೆ.
ಸಿಸಿಬಿ ಅಧಿಕಾರಿಗಳು ಜಾರಿ ಮಾಡಿರುವ ಪತ್ರಿಕಾಪ್ರಕಟಣೆ ಪ್ರಕಾರ ದಿನಾಂಕ 22/06/2021 ರಂದು ಬೆಳಿಗ್ಗೆ ಸುಮಾರು 11:30 ಗಂಟೆ ಸಮಯದಲ್ಲಿ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶೆರ್ಲ್‌ಟನ್ ಹೋಟೆಲ್‌ನಲ್ಲಿ ತಂಗಿದ್ದ ತಮ್ಮ ವೀಸಾ ಅವಧಿ ಮುಗಿದಿದ್ದರೂ ಸಹ ಅಕ್ರಮವಾಗಿ ಭಾರತದಲ್ಲಿ ನೆಲಸಿದ್ದ ಕ್ಯಾಮರೂನ್ ದೇಶದ ಪ್ರಜೆಗಳನ್ನು ಎಂಬುವವರನ್ನು ವಶಕ್ಕೆ ಪಡೆದು ಪಾಸ್‌ಪೋರ್ಟ್ ಮತ್ತು ವಿಸಾ ದಾಖಲಾತಿಗಳನ್ನು ಪರಿಶೀಲಿಸಲಾಯಿತು.
ಒಬ್ಬ ವ್ಯಕ್ತಿಯು ಯಾವುದೇ ಪಾಸ್‌ಪೋರ್ಟ್ ಹೊಂದದೇ ಇದ್ದು , ಮತ್ತೊಬ್ಬ ವ್ಯಕ್ತಿಯು ಮೆಡಿಕಲ್ ಅಟೆಂಡರ್ ಎಂದು ವೀಸಾ ಪಡೆದುಕೊಂಡು ಭಾರತಕ್ಕೆ ಬಂದಿದ್ದು ನಂತರ ಆತನ ವೀಸಾ ಅವಧಿಯೂ ದಿನಾಂಕ.02-05-2021 ರಂದು ಮುಗಿದಿದ್ದರೂ ಸಹ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುತ್ತಾನೆ.
ಅವರುಗಳ ಇವರ ಕೊಠಡಿಯಲ್ಲಿ ಒಂದು ಕಿಟ್ ಬಾಕ್ಸ್ ದೊರೆತಿದ್ದು ಅದರಲ್ಲಿ ನಕಲಿ ವಿದೇಶಿ ಹಣದ ದಂಧೆ ನಡೆಸುವ ಉದ್ದೇಶದಿಂದ ಇಟ್ಟುಕೊಂಡಿದ್ದ ಅಮೆರಿಕನ್ 100 ಡಾಲರ್ ಮುಖಬೆಲೆಯ 100 ನೋಟುಗಳಿರುವ 9 ಬಂಡಲ್‌ಗಳಿದ್ದು ಇವುಗಳು ನಕಲಿ ಡಾಲರ್‌ಗಳಾಗಿರುತ್ತವೆ . ಹಾಗು ಇವುಗಳ ಜೊತೆಯಲ್ಲಿ ದ್ರವ ರೂಪದ ಕೆಮಿಕಲ್ , ಪೌಡರ್ ಮತ್ತಿತರ ವಸ್ತುಗಳು ದೊರೆತಿರುತ್ತವೆ . ಇವರುಗಳಿಗೆ ಭಾರತದ ಕರೆನ್ಸಿ 10 ಲಕ್ಷ ರೂ ಹಣ ಕೊಟ್ಟರೆ ಒಂದು ಕೋಟಿ ಅಮೆರಿಕನ್ ಡಾಲರ್ ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುತ್ತಾರೆ . ಈ ರೀತಿ ಅನೇಕ ಸಾರ್ವಜನಿಕರಿಗೆ ಮೋಸ ಮಾಡಿರುವುದು ಕಂಡುಬಂದಿರುತ್ತದೆ, ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆಸಾಮಿಗಳನ್ನು ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಶಕ್ಕೆ ಪಡೆದುಕೊಂಡು ಅವರ ವಿರುದ್ದ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.
New ways of Cheating..Pay Rs 10 lakhs, get 80 Lakhs worth US$ dollars!! This is how 2 foreign nationals cheated people..Came to India on Medical Visa.. 2 arrested by CCB..case under cheating & Foreigners Act..further investigation on.. @CPBlr @BlrCityPolice pic.twitter.com/IQ9ZwY1A9H
— Sandeep Patil IPS (@ips_patil) June 24, 2021
ಈ ಕಾರ್ಯಾಚರಣೆಯನ್ನು ಸಿಸಿಬಿ , ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.