ಬೆಂಗಳೂರು:
ಆರ್.ಎಸ್.ಎಸ್ ಸರ ಸಂಘಚಾಲಕ್ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ( ಭೈಯಾಜೀ) ಜೋಶಿ
ಅವರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರೂಪಣೆ ಹಾಗೂ ನಿರ್ಣಯ ತೆಗೆದುಕೊಳ್ಳುವ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಚನ್ನೇನಹಳ್ಳಿಯಲ್ಲಿ ಶುಕ್ರವಾರ ಆರಂಭಗೊಂಡಿತು.
ಭಾಗವತ್ ಮತ್ತು ಭೈಯಾಜೀ ಜೋಶಿ ಅವರು ಎಬಿಪಿಎಸ್ ಉದ್ಘಾಟಿಸಿ ದರು. ಬಿಜೆಪಿ, ವಿಶ್ವಹಿಂದು ಪರಿಷತ್, ಎಬಿವಿಪಿ, ವಿದ್ಯಾಭಾರತಿ, ಸೇವಾ ಭಾರತಿ ಮತ್ತಿತರ ಸಂಘಪರಿವಾರದ ಸಂಘಟನೆಗಳ ಸುಮಾರು 450 ಪ್ರತಿನಿಧಿಗಳು ಸಭಾದಲ್ಲಿ ಭಾಗವಹಿಸಿದ್ದಾರೆ. ಶನಿವಾರವೂ ಎಬಿಪಿಎಸ್ ನಡೆಯಲಿದೆ.
ಸಂಘ ಶಾಖೆಯ ವಿಸ್ತಾರ ಸೇರಿದಂತೆ ವಿವಿಧ ಚಟುವಟಿಕೆಯ ವರದಿ, ಮುಂದಿನ ಕಾರ್ಯಯೋಜನೆ ಹಾಗೂ ರಾಷ್ಟ್ರೀಯ ಮಹತ್ವದ ಪ್ರಮುಖ ವಿಷಯದ ಚರ್ಚೆ ಎಬಿಪಿಎಸ್‌ನಲ್ಲಿ ನಡೆಯಲಿದೆ.
RSS Sarasanghachalak Dr Mohan Bhagwat, Sarakaryavah Suresh Bhaiyyaji Joshi inaugurated RSS Akhil Bharatiya Pratinidhi Sabha (ABPS) at Janaseva Vidya Kendra, Channenahalli, Bengaluru. It is a semi-virtual event this time. pic.twitter.com/ZSzJxuYnpz
— Rajesh Padmar (@rajeshpadmar) March 19, 2021
ಕೋವಿಡ್ ಕಾರಣ ಎಲ್ಲ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡಿದ್ದು, ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ವರ್ಚುವಲ್ ವ್ಯವಸ್ಥೆ ಮೂಲಕ ಭಾಗವಹಿಸಲು ಅನುಕೂಲ ಆಗುವಂತೆ ದೇಶದ 44 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.