ಬೆಂಗಳೂರು:
ಇತ್ತೀಚೆಗೆ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶರಣು ಸಲಗಾರ್ ಹಾಗೂ ಬಸವನಗೌಡ ತುರುವಿನಹಾಳ ಇವರು ನೂತನ ಶಾಸಕರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸ ಸಮಾರಂಭದಲ್ಲಿ ನೂತನ ಶಾಸಕರಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಜ್ಞಾವಿಧಿ ಬೋಧಿಸಿದರು.
— Sharanu Salagar (@salagar_sharanu) June 8, 2021
ಬಸವಕಲ್ಯಾಣ ನೂತನ ಶಾಸಕ ಶರಣು ಸಲಗಾರ್ ಕ್ರಾಂತಿಕಾರಿ ಬಸವಣ್ಣ, ಬಸವ ಕಲ್ಯಾಣದ ಪ್ರಜೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ,ಮಸ್ಕಿ ನೂತನ ಶಾಸಕ – ಬಸವನಗೌಡ ತುರುವಿಹಾಳ್ ರೈತರ ಹಾಗೂ ಮಸ್ಕಿ ಪ್ರಜೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.