ನವದೆಹಲಿ/ಬೆಂಗಳೂರು:
ಯುಗಾದಿ ಹಬ್ಬವನ್ನು ದೇಶಾದ್ಯಂತ ಜನತೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಯುಗಾದಿ ಹಬ್ಬದ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಬಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
देशवासियों को नव संवत्सर की असीम शुभकामनाएं। pic.twitter.com/lKoD755COz
— Narendra Modi (@narendramodi) March 22, 2023
ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯ ! pic.twitter.com/SEYqoPUsHl
— Narendra Modi (@narendramodi) March 22, 2023
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶೋಭಾಕೃತ್ ನಾಮ ಸಂವತ್ಸರವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/VQlt3H4QoG
— Basavaraj S Bommai (@BSBommai) March 22, 2023
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟ್ವೀಟ್ ಮಾಡಿ, ಎಲ್ಲಾ ದೇಶವಾಸಿಗಳಿಗೆ ಚೈತ್ರ ಶುಕ್ಲಾದಿ, ಯುಗಾದಿ, ಗುಡಿ-ಪಡ್ವಾ, ಚೇತಿ-ಚಾಂದ್, ನವ್ರೆಹ್ ಮತ್ತು ಸಜಿಬು-ಚೆರೋಬಾದ ಶುಭಾಶಯಗಳನ್ನು ಕೋರುತ್ತೇನೆ. ಹೊಸ ವರ್ಷದ ಆಗಮನದಂದು ಆಚರಿಸಲಾಗುವ ಈ ವಿವಿಧ ಹಬ್ಬಗಳು ನಮ್ಮ ಸಂಸ್ಕೃತಿಯ ವಾಹಕಗಳಾಗಿವೆ. ಈ ಪವಿತ್ರ ಹಬ್ಬಗಳ ಸಂದರ್ಭದಲ್ಲಿ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ಬಯಸುತ್ತೇನೆಂದು ಹೇಳಿದ್ದಾರೆ.
चैत्र शुक्लादि, उगादी, गुड़ी-पड़वा, चेती-चाँद, नवरेह और साजिबु-चेरोबा पर मैं सभी देशवासियों को शुभकामनाएं देती हूं। नव वर्ष के आगमन पर मनाए जाने वाले ये विभिन्न त्यौहार हमारी जीवंत संस्कृति के वाहक हैं। इन पावन पर्वों के अवसर पर मैं सभी की सुख-समृद्धि की मंगलकामना करती हूं।
— President of India (@rashtrapatibhvn) March 22, 2023
ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ. ನವ ಸಂವತ್ಸರ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಹೊಸ ಭರವಸೆ ತರಲಿ ಎಂದು ಶುಭ ಹಾರೈಸುತ್ತೇನೆಂದು ತಿಳಿಸಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇಂದು ನನ್ನ ನಿವಾಸದಲ್ಲಿ ಗೋ ಪೂಜೆ ನೆರವೇರಿಸಿದೆ. ಹಿಂದೂ ಧರ್ಮದಲ್ಲಿ ಗೋ ಪೂಜೆ ಸರ್ವ ಶ್ರೇಷ್ಠವಾಗಿದ್ದು, ನಾಡಿಗೆ ಸಕಲ ಸನ್ಮಂಗಳವಾಗಲಿ ಎಂದು ಗೋಮಾತೆಯನ್ನು ಪ್ರಾರ್ಥಿಸಿದೆ.
— DK Shivakumar (@DKShivakumar) March 22, 2023
ನವ ಸಂವತ್ಸರವು ಪ್ರತಿಯೊಬ್ಬರ ಬದುಕಿನಲ್ಲಿ ಖುಷಿ ಹಾಗೂ ಬೆಳಕನ್ನು ತರಲಿ. pic.twitter.com/r8t6CiL9wb
ಹೊಸತು ಎಂದರೆ ಖುಷಿ, ಹೊಸತು ಎಂದರೆ ಸಂತೋಷ. ಹೊಸ ಸಂವತ್ಸರವು ನಿಮ್ಮ ಬದುಕಿನಲ್ಲಿ ಖುಷಿ, ಸಂತೋಷದ ಜೊತೆಗೆ ಹೊಸ ಬೆಳಕನ್ನು ತರಲಿ. ಬೇವಿನ ಕಹಿಯ ಜೊತೆ ಬೆಲ್ಲದ ಸಿಹಿ ಬೆರೆತರೆ ಬದುಕು ಅರ್ಥಪೂರ್ಣ. ಸಮಸ್ತ ಕರ್ನಾಟಕದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. pic.twitter.com/8NqbMHOcyK
— DK Shivakumar (@DKShivakumar) March 22, 2023