
ನವದೆಹಲಿ:
ಕರ್ನಾಟಕನ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ನಿರ್ಧರಿಸಿರುವುದನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಖಂಡಿಸಿದ್ದಾರೆ.
ಸರ್ಕಾರದ ನಡೆಯನ್ನು ವಿದ್ಯಾರ್ಥಿಗಳ ವಿರೋಧಿ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದು ಯುವ ಪೀಳಿಗೆಯ ಭವಿಷ್ಯದೊಂದಿಗೆ ಕಾಂಗ್ರೆಸ್ ಸರ್ಕಾರ ಆಟವಾಡಬಾರದು ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ಯ ಬಗ್ಗೆ ಅಸಂಬದ್ಧ ಹೇಳಿಕೆ ನೀಡುವುದರಿಂದ ದೆಹಲಿಯಲ್ಲಿರುವ ಅವರ ವರಿಷ್ಠರಿಗೆ ಸಂತೋಷವಾಗಬಹುದು ಆದರೆ ಕರ್ನಾಟಕದ ವಿದ್ಯಾರ್ಥಿಗಳ ಹಿತಾಸಕ್ತಿಯೊಂದಿಗೆ ರಾಜೀ ಮಾಡಿಕೊಳ್ಳುತ್ತದೆ ಎಂದು ಪ್ರಧಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Questions for my dear friend @DKShivakumar!
— Dharmendra Pradhan (@dpradhanbjp) August 22, 2023
1) Does he and the Congress party oppose early childhood care and education as a part of formal education? Does he not want our children to achieve foundational literacy and numeracy by the time they complete grade 2?
2) Does he… pic.twitter.com/uwje64ynPj
ಮುಂದಿನ ಶೈಕ್ಷಣಿಕ ವರ್ಷದಿಂದ ಎನ್ಇಪಿ ರದ್ದುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಕಳೆದವಾರ ಹೇಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನ್, “ಎನ್‌ಇಪಿ 21 ನೇ ಶತಮಾನದ ಭವಿಷ್ಯದ ಡಾಕ್ಯುಮೆಂಟ್ ಆಗಿದೆ, ರಾಜಕೀಯ ಡಾಕ್ಯುಮೆಂಟ್ ಅಲ್ಲ. ಎನ್‌ಇಪಿ 21 ನೇ ಶತಮಾನದ ಹೊಸ ಉದಯೋನ್ಮುಖ ತಂತ್ರಜ್ಞಾನ, ಶಾಲಾ ವ್ಯವಸ್ಥೆಯಲ್ಲಿ ಕೌಶಲ್ಯ ಆಧಾರಿತ ಶಿಕ್ಷಣದ ಕುರಿತದ್ದಾಗಿದೆ ಎಂದು ಹೇಳಿದ್ದಾರೆ.
ಅವರು ಯಾವ ರೀತಿಯ ರಾಜಕೀಯವನ್ನು ಮಾಡಲು ಬಯಸುತ್ತಾರೆ, ರಾಜಕೀಯವು ತನ್ನದೇ ಆದ ಮಾರ್ಗವನ್ನು ತೆಗೆದುಕೊಳ್ಳಲಿ ಮತ್ತು ಕರ್ನಾಟಕ ಸರ್ಕಾರ ಯುವ ಪೀಳಿಗೆಯ ಭವಿಷ್ಯದ ಜೊತೆ ಆಟವಾಡಬಾರದು ಎಂದು ಹೇಳಿದ್ದಾರೆ. ಶಿವಕುಮಾರ್ ಅವರಿಗೆ ಕೇಂದ್ರ ಸಚಿವರು ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ.