ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು:
ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಸುರಕ್ಷಿತ ನಗರ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು
ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ಇರಬೇಕು. ನಮ್ಮ ಪೊಲಿಸರ ಮೇಲಿನ ನಂಬಿಕೆಯಿಂದ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗದೆ. ಮಹಿಳೆಯರು ಪುರುಷರು ಸಮಾನವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಬೇಕು ಎನ್ನುವ ಕಾರಣಕ್ಕೆ ಮಹಿಳೆಯರಿಗೆ ರಾತ್ರಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ದೌರ್ಜನ್ಯ ತಡೆಯಲು ಕ್ರಮ
ದೇಶದ 130 ಕೋಟಿ ಜನ ಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಎಲ್ಲರಿಗೂ ಬದುಕಿನಲ್ಲಿ ಮುಂದುಬರೆಬೇಕೆನ್ನುವ ಉತ್ಸಾಹವಿದ್ದು, ಮಹಿಳೆಯರಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಇದೆ. ಅವರೂ ಶಾಲೆಗೆ ಹಾಗೂ . ಉದ್ಯೋಗಕ್ಕೆ ಹೋಗಬೇಕು. ಆದರೆ ಹಲವಾರು ಸಂದರ್ಭಗಳಲ್ಲಿ ಅವರ ಮೇಲೆ ದೌರ್ಜನ್ಯ ಆಗುತ್ತಿದೆ. ಇದನ್ನು ತಡೆಯಲು ಹಲವಾರು ಉಪಾಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದೆ ನಿರ್ಭಯ ಪ್ರಕರಣದ ನಂತರ ಕಾನೂನು ತರಲಾಗಿದೆ. ಕಾನೂನಿಗೆ ಬಳ ತುಂಬಲು ಕಾನೂನಿನ ವ್ಯವಸ್ಥೆ ಯ ನಿರ್ವಹಣೆ ಅಗತ್ಯ. ವ್ಯಾಪಕವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಒದಗಿಸುವುದು ಸವಾಲು. ಅಂಥಹುದರಲ್ಲಿ ಮಹಿಳೆಯರ ಸುರಕ್ಷತೆ ಒದಗಿಸುವ ಮಹತ್ವದ ಕೆಲಸವಿದ್ದರೂ, ತಂತ್ರಜ್ಞಾನದ ಬಳಕೆ ಇಲ್ಲದೆ ಅದು ಅಸಾಧ್ಯ ಎಂದು ಮನಗಂಡು ಕೇಂದ್ರ ಸರ್ಕಾರ 668 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತಂದಿದೆ. ಯೋಜನೆ ರೂಪಿಸಲು ಸ್ವಲ್ಪ ಸಮಯ ಹಿಡಿಯಿತಾದರೂ ಸವಾಲಿನ ಕೆಲಸವನ್ನು ಕೈಗೆತ್ತಿಕೊಂಡು ಈ ಯೋಜನೆ ಯಾವ ರೀತಿ ಅನುಷ್ಠಾನಗೊಳಿಸಬೇಕು ಎನ್ನುವ ಕುರಿತು ಸಾಕಷ್ಟು ಸಂಶೋಧನೆ ಮಾಡಲಾಯಿತು.
A giant leap towards a safer Bengaluru. Visited the Bengaluru Safe City Command Centre & inspected the state-of-the-art equipment/techniques to safeguard our children, women and senior citizens. This will go a long way in realising PM Modi's vision of safe & developed #NewIndia. pic.twitter.com/3Qt7O3hhVm
— Amit Shah (@AmitShah) March 3, 2023
ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಕ್ಯಾಮರಾಗಳನ್ನು ಅಳವಡಿಸಿ ಈಗ ಎಲ್ಲೆಡೆ ಸಂಖ್ಯೆ ಯನ್ನು ಕ್ಯಾಮೆರಾ ಹೆಚ್ಚಿಸಲಾಗಿದೆ. ಈಗಾಗಲೇ 4 ಸಾವಿರ ಕ್ಯಾಮರಾ ಅಳವಡಿಸಲಾಗಿದೆ. ಡಾರ್ಕ್ ಸ್ಪಾಟ್ ಗಳಲ್ಲಿ ಆದ್ಯತೆ ಮೇರೆಗೆ ಕ್ಯಾಮರಾ ಅಳವಡಿಸಬೇಕು ಎಂದು ಸಲಹೆ ನೀಡಿದರು.
6 ಮಹಿಳಾ ಪೊಲೀಸ್ ಠಾಣೆ
ಈ ಯೋಜನೆಯಡಿ 112 ದ್ವಿಚಕ್ರ ವಾಹನಗಳನ್ನು ಇದಕ್ಕೆ ಜೋಡಿಸಿರುವುದು ಶ್ಲಾಘನೀಯ. ಅತ್ಯಾಧುನಿಕ ಕ್ಯಾಮರಾಗಳ ಸದ್ಬಳಕೆ ಯಾಗಬೇಕು. ಕಮಾಂಡ್ ಸೆಂಟರ್ ಹೆಚ್ಚು ಪ್ರಬಲವಾಗಿರಬೇಕು. ಕಡಿಮೆ ಸಮಯದಲ್ಲಿ ಘಟನಾ ಸ್ಥಳಕ್ಕೆ ತಲುಪುವುದು ಪೊಲೀಸರ ದಕ್ಷತೆಯನ್ನು ಬಿಂಬಿಸುತ್ತದೆ. 8 ಸಿಇ ಎನ್ ಪೊಲೀಸ್ ಠಾಣೆಗಳಿವೆ. ಸಂಚಾರ ದಟ್ಟಣೆ ಕಡಿಮೆ ಮಾಡಲು 4 ಹೊಸ ಪೊಲೀಸ್ ಠಾಣೆ ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ 9 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ, 5 ಸಂಚಾರ ಪೋಲಿಸ್ ಠಾಣೆ ಮತ್ತು 6 ಮಹಿಳಾ ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ ಎಂದರು.
A giant leap towards a safer Bengaluru. Visited the Bengaluru Safe City Command Centre & inspected the state-of-the-art equipment/techniques to safeguard our children, women and senior citizens. This will go a long way in realising PM Modi's vision of safe & developed #NewIndia. pic.twitter.com/3Qt7O3hhVm
— Amit Shah (@AmitShah) March 3, 2023
Flagged off a Mobile Command and Control Center and a new fleet of 112 emergency service vehicles in Bengaluru today. These steps were taken to further strengthen the police force of Bengaluru. pic.twitter.com/5SUoKvWTKg
— Amit Shah (@AmitShah) March 3, 2023
The PM @narendramodi government is aware that modern safety and security require much more than merely policing. Launched the Safe City Project in Bengaluru, a cutting-edge security system to prevent and investigate crimes and maintain surveillance. pic.twitter.com/IE3Zyb1cFi
— Amit Shah (@AmitShah) March 3, 2023
The Safe City Project is meant to equip the country's police with technology to face the emerging challenges of this century. pic.twitter.com/vsZZv6Kh5n
— Amit Shah (@AmitShah) March 3, 2023
Only the police force that is fit as well as sensitive, can serve the people the best. pic.twitter.com/P5u2SYUcKV
— Amit Shah (@AmitShah) March 3, 2023
The technology used for Safe City Project is not only state-of-the-art but is also 100% indigenous. pic.twitter.com/QCQ0qPt4j1
— Amit Shah (@AmitShah) March 3, 2023
The Police Technology Mission initiated by @narendramodi ji is working with a holistic approach. The mission aims to make India's police the best in the world. pic.twitter.com/jmK5AQyEW4
— Amit Shah (@AmitShah) March 3, 2023
ಗೃಹ ಸಚಿವರ ಬೆಂಬಲ
ಇವೆಲ್ಲವೂ ಕೇಂದ್ರ ಗೃಹ ಸಚಿವರ ಬೆಂಬಲದಿಂದ ಸಾಧ್ಯವಾಗಿದೆ. ಗುಜರಾತಿನ ನಂತರ ಎಫ್.ಎಸ್.ಎಲ್ ವಿಶ್ವವಿದ್ಯಾಲಯವನ್ನು ಕರ್ನಾಕಕ್ಕೆ ನೀಡಿದ್ದಾರೆ. ಎಫ್.ಎಸ್.ಎಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪರಾಧ ನಿಯಂತ್ರಣ, ಪಿ.ಎಫ್.ಐ ರದ್ದತಿ, ಭಯೋತ್ಪಾದನೆ ಚಟುವಟಿಕೆ ಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಅವರು ಸಹಾಯ ಮಾಡುತ್ತಿದ್ದಾರೆ. ಮಾದಕ ವಸ್ತು ಗಳ ನಿಯಂತ್ರಣಕ್ಕೆ ಕಠಿಣ ಕ್ರಮ ವಹಿಸಿದೆ. ಅವರು ಕರ್ನಾಟಕದ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ವಿ.ಸೋಮಣ್ಣ, ಎಸ್.ಟಿ. ಸೋಮಶೇಖರ್, ಶಾಸಕ ಉದಯ್ ಗರುಡಾಚಾರ್ , ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.