ಸಕಲೇಶಪುರ/ಹಾಸನ:
ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಸನ ಜಿಲ್ಲೆ ಸಕಲೇಶಪುರದಲ್ಲಿಂದು ಅಬ್ಬರದ ಪ್ರಚಾರ ನಡೆಸಿದರು. ತೆರೆದ ವಾಹನದಲ್ಲಿ ಜನರ ಹರ್ಷೋದ್ಘಾರ ಮಧ್ಯೆ ರೋಡ್ ಶೋ ನಡೆಸಿದ ಅಮಿತ್ ಶಾ, ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ಪ್ರಚಾರ ನಡೆಸಿದರು. ಪ್ರೀತಂ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಎನ್ ಐ ಜೊತೆಗೆ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಜಾತಿವಾದಿ ಸ್ವಭಾವವನ್ನು ಹೊಂದಿದೆ, ಬಿಜೆಪಿ ತನ್ನೊಂದಿಗೆ ಎಲ್ಲಾ ವರ್ಗಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಯಾವ ಪಕ್ಷಗಳೂ ಮಾಡದ ರೀತಿಯಲ್ಲಿ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ.
— Amit Shah (@AmitShah) April 24, 2023
ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುವ ಮೂಲಕ ಕರ್ನಾಟಕವನ್ನು ಅತ್ಯಂತ ಸಮೃದ್ಧ ರಾಜ್ಯವನ್ನಾಗಿ ಮಾಡಲು ಹಾಗೂ ಉತ್ತಮ ಆಡಳಿತವನ್ನು ಬಲಪಡಿಸಲು ಬಿಜೆಪಿ ಬದ್ಧವಾಗಿದೆ.
ಸಕಲೇಶಪುರ ರೋಡ್ ಶೋನ ಚಿತ್ರಗಳು. pic.twitter.com/sldCg5o6q1
ಇದೇ ವೇಳೆ ರಾಹುಲ್ ಅವರ ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಅಮಿತ್, ರಾಹುಲ್ ಖಚಿತವಾದ ಸಾಕ್ಷ್ಯ ಹೊಂದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕು. ಯಾವುದೇ ತನಿಖೆಯೂ ಇಲ್ಲ ಅಥವಾ ಯಾವುದೇ ಪ್ರಕರಣವೂ ಇಲ್ಲ. ಇಂತಹ ಆಧಾರ ರಹಿತ ಆರೋಪಗಳನ್ನು ಜನ ಹೇಗೆ ನಂಬುತ್ತಾರೆ? ಎಂದು ಪ್ರಶ್ನಿಸಿದರು.
Overwhelmed by the affection and support here at the roadshow in Sakleshpur (Hassan).
— Amit Shah (@AmitShah) April 24, 2023
ಹಾಸನದ ಸಕಲೇಶಪುರದಲ್ಲಿ ರೋಡ್ ಶೋಗೆ ವ್ಯಕ್ತವಾಗುತ್ತಿರುವ ಬೆಂಬಲ ಮತ್ತು ಪ್ರೀತಿ ಕಂಡು ನನಗೆ ಅತೀವ ಆನಂದವಾಗಿದೆ. https://t.co/tckZWMlTqN
ಬಿಜೆಪಿ ಸರ್ಕಾರ ದೇಶಾದ್ಯಂತ ಅತ್ಯಂತ ಭ್ರಷ್ಟವಾಗಿದೆ. 40% ಕಮಿಷನ್ ತೆಗೆದುಕೊಳ್ಳುತ್ತಾರೆ. ಅದೇ ಹಣವನ್ನು ಹಿಂದಿನ ಸರ್ಕಾರದ ಶಾಸಕರ ಖರೀದಿಗೆ ಬಳಸಲಾಗುತ್ತಿತ್ತು. ಗೋವಾ, ಮಧ್ಯ ಪ್ರದೇಶ, ಕರ್ನಾಟಕ, ಈಶಾನ್ಯ ಶಾಸಕರನ್ನು ಖರೀದಿಸಲು ಬಳಸಿದ ಹಣದ ಮೂಲದ ಬಗ್ಗೆ ಪ್ರಧಾನಿ ತಿಳಿಸುವರೇ. ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.