Home ರಾಜಕೀಯ ಪುನರ್ ರಚನೆಗೊಂಡಿರುವ ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ...

ಪುನರ್ ರಚನೆಗೊಂಡಿರುವ ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ನೇಮಕ

22
0

ನವ ದೆಹಲಿ: ಪುನರ್ ರಚನೆಗೊಂಡಿರುವ ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ನೇಮಕಗೊಂಡಿದ್ದಾರೆ. ಇವರೊಂದಿಗೆ ಬಿಜೆಪಿ ಮೈತ್ರಿಕೂಟ ಪಕ್ಷಗಳ ಸಚಿವರಾದ ಜಿತನ್ ರಾಮ್ ಮಾಂಝಿ, ರಾಜೀವ್ ರಂಜನ್ ಸಿಂಗ್, ಕೆ‌.ಆರ್‌.ನಾಯ್ಡು ಹಾಗೂ ಚಿರಾಗ್ ಪಾಸ್ವಾನ್ ಕೂಡಾ ವಿಶೇಷ ಆಹ್ವಾನಿತರಾಗಿ ನೇಮಕಗೊಂಡಿದ್ದಾರೆ.

ನೀತಿ ಆಯೋಗದ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ಮುಂದುವರಿಯಲಿದ್ದಾರೆ. ಅರ್ಥಶಾಸ್ತ್ರಜ್ಞ ಸುಮನ್ ಕೆ. ಬೆರಿ ಕೂಡಾ ಆಯೋಗದ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಪುನರ್ ರಚನೆಗೊಂಡಿರುವ ನೀತಿ ಆಯೋಗದ ಪೂರ್ಣಾವಧಿ ಸದಸ್ಯರಾಗಿ ವಿಜ್ಞಾನಿ ವಿ.ಕೆ.ಸರಸ್ವತಿ, ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್, ಮಕ್ಕಳ ತಜ್ಞ ವಿ.ಕೆ.ಪೌಲ್ ಹಾಗೂ ಬೃಹತ್ ಯೋಜನೆಗಳ ಆರ್ಥಿಕ ತಜ್ಞ ಅರವಿಂದ್ ವಿರ್ಮಾನಿ ಮುಂದುವರಿಯಲಿದ್ದಾರೆ.

65 ವರ್ಷದಷ್ಟು ಹಳತಾದ ಯೋಜನಾ ಆಯೋಗದ ಬದಲಿಗೆ 2015ರಲ್ಲಿ ಮೊದಲ ಬಾರಿಗೆ ನೀತಿ ಆಯೋಗವನ್ನು ರಚಿಸಲಾಗಿತ್ತು.

LEAVE A REPLY

Please enter your comment!
Please enter your name here