Home ಹುಬ್ಬಳ್ಳಿ Vocal For Local | ಹುಬ್ಬಳ್ಳಿಯಲ್ಲಿ ವೋಕಲ್ ಫಾರ್ ಲೋಕಲ್ ಗೆ ಪ್ರೋತ್ಸಾಹಿಸಿದ ಸಚಿವ ಪ್ರಹ್ಲಾದ್​...

Vocal For Local | ಹುಬ್ಬಳ್ಳಿಯಲ್ಲಿ ವೋಕಲ್ ಫಾರ್ ಲೋಕಲ್ ಗೆ ಪ್ರೋತ್ಸಾಹಿಸಿದ ಸಚಿವ ಪ್ರಹ್ಲಾದ್​ ಜೋಶಿ

55
0
Union Minister Prahlad Joshi encouraged Vocal for Local in Hubbali

ಹುಬ್ಬಳ್ಳಿ:

ದೀಪಾವಳಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಸ್ಥಳೀಯ ಕರಕುಶಲ ವಸ್ತುಗಳಲ್ಲಿ ಒಂದಾದ ಮಣ್ಣಿನ ದೀಪದ ಹಣತೆಯನ್ನು ಖರೀದಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಬೆಂಬಲ ನೀಡಿದ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಅವರು ದೀಪಗಳ ಹಬ್ಬ ದೀಪಾವಳಿ ಆಚರಿಸಿದ್ದೇನೆ ಎಂದು ಎಕ್ಸ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

“#VocalForLocal ದೀಪಾವಳಿಯ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಸ್ಥಳೀಯ ಕರಕುಶಲ ವಸ್ತುಗಳಲ್ಲಿ ಒಂದಾದ ಮಣ್ಣಿನ ದೀಪದ ಹಣತೆಯನ್ನು ಖರೀದಿಸುವ ಮೂಲಕ ಪ್ರಧಾನಮಂತ್ರಿ ಶ್ರೀ @narendramodi ಅವರ #VocalForLocal ಅಭಿಯಾನದಲ್ಲಿ ಭಾಗವಹಿಸಿ, ದೀಪಗಳ ಹಬ್ಬ ದೀಪಾವಳಿ ಆಚರಿಸಿದೆನು.
ನಾವು ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸುವಂತೆ ನಮ್ಮವರು ಹಬ್ಬ ಆಚರಿಸುವಂತಾಗಬೇಕು ಎಂಬುದು ಮೋದಿಜೀಯ ಆಶಯ. ಇದನ್ನು ಸಾಕರಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಮಾತ್ರವಲ್ಲದೆ ನಮ್ಮ ಜವಾಬ್ದಾರಿಯೂ ಹೌದು. ನೀವೂ ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ, ದೇಶೀಯ ಉತ್ಪನ್ನಗಳನ್ನು ಬೆಂಬಲಿಸಿ,” ಎಂದು ಕರೆ ನೀಡಿದ್ದರು.

LEAVE A REPLY

Please enter your comment!
Please enter your name here