ಬೆಂಗಳೂರು:
ಹಠಾತ್ ಬೆಳವಣಿಗೆಯೊಂದರಲ್ಲಿ, ಕೇಂದ್ರ ಸಚಿವ ತವಾರ್ಚಂದ್ ಗೆಹ್ಲೋಟ್ (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ) ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಭಾರತದ ರಾಷ್ಟ್ರಪತಿ ನೇಮಿಸಿದ್ದಾರೆ.
ರಾಷ್ಟ್ರಪತಿ ಭವನವು ವಿವಿಧ ರಾಜ್ಯಗಳಿಗೆ ಎಂಟು ರಾಜ್ಯಪಾಲರ ನೇಮಕ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಮೇ 18, 1948 ರಂದು ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ ದಲಿತ ಕುಟುಂಬದಲ್ಲಿ ಜನ್ಮಿಸಿದ ಗೆಹ್ಲೋಟ್ ಪ್ರಸ್ತುತ ಮೇಲ್ಮನೆಯ ಸದನದ ನಾಯಕರಾಗಿದ್ದಾರೆ.
ಇತರ ನೇಮಕಾತಿಗಳಲ್ಲಿ ಕಂಭಂಪತಿ ಹರಿ ಬಾಬು (ಮಿಜೋರಾಂ), ಮಂಗುಭಾಯ್ ಚಗನ್‌ಭಾಯ್ ಪಟೇಲ್ (ಮಧ್ಯಪ್ರದೇಶ), ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್ (ಹಿಮಾಚಲ ಪ್ರದೇಶ), ಪಿ.ಎಸ್.ಶ್ರೀಧರನ್ ಪಿಳ್ಳೈ (ಗೋವಾ ರಾಜ್ಯಪಾಲರಾಗಿ ವರ್ಗಾವಣೆ ಮತ್ತು ನೇಮಕ) ಸತ್ಯದೇವ್ ನಾರಾಯಣ್ ಆರ್ಯ (ವರ್ಗಾವಣೆ ಮತ್ತು ತ್ರಿಪುರ) , ರಮೇಶ್ ಬೈಸ್ (ಜಾರ್ಖಂಡ್), ಬಂಡಾರು ದತ್ತಾತ್ರೇಯ (ಹರಿಯಾಣ ರಾಜ್ಯಪಾಲರಾಗಿ ವರ್ಗಾವಣೆ ಮತ್ತು ನೇಮಕ).