ಬೆಂಗಳೂರು:
ಮೇ 28 ರಂದು ಭಾನುವಾರ ಯುಪಿಎಸ್ ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿರುವುದರಿಂದ ಅಂದು ಮೆಟ್ರೋ ರೈಲುಗಳ ಸಂಚಾರ ಬೆಳಿಗೆ 6 ಗಂಟೆಯಿಂದಲೇ ಪ್ರಾರಂಭವಾಗಲಿವೆ. ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರೈಲುಗಳ ಸಂಚಾರ ಆರಂಭವಾಗುತಿತ್ತು. ಆದರೆ, ಪರೀಕ್ಷೆ ಹಿನ್ನೆಲೆಯಲ್ಲಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರವನ್ನು ಬಿಎಂಆರ್ ಸಿಎಲ್ ಆರಂಭಿಸಲು ನಿರ್ಧರಿಸಿದೆ.
ಈ ಕುರಿತು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದು, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Early commencement of Namma Metro Services on 28.05.2023 (Sunday) in view of UPSC Civil Services Preliminary Exam. pic.twitter.com/va1TGqKKDM
— ನಮ್ಮ ಮೆಟ್ರೋ (@cpronammametro) May 26, 2023
ಬೈಯಪ್ಪನಹಳ್ಳಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್. ಪುರ ಮತ್ತು ವೈಟ್ ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ ಎಂದು ಅವರು ತಿಳಿಸಿದ್ದಾರೆ.