Home ರಾಜಕೀಯ ವಾಲ್ಮೀಕಿ ಹಗರಣ: ಸಿಎಂ, ಡಿಸಿಎಂ ಅವರ ಹೆಸರೇಳುವಂತೆ ಒತ್ತಾಯಿಸಿದ ಇಬ್ಬರು ಇಡಿ ಅಧಿಕಾರಿಗಳ​ ವಿರುದ್ಧ ಎಫ್...

ವಾಲ್ಮೀಕಿ ಹಗರಣ: ಸಿಎಂ, ಡಿಸಿಎಂ ಅವರ ಹೆಸರೇಳುವಂತೆ ಒತ್ತಾಯಿಸಿದ ಇಬ್ಬರು ಇಡಿ ಅಧಿಕಾರಿಗಳ​ ವಿರುದ್ಧ ಎಫ್ ಐ ಆರ್

25
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರೇಳುವಂತೆ ನಿಗಮದ ಹಿಂದಿನ ಎಂಡಿ ಕಲ್ಲೇಶಪ್ಪ ಅವರಿಗೆ ಒತ್ತಾಯಿಸಿದ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್ ಐ ಆರ್ ದಾಖಲಿಸಲಾಗಿದೆ.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗೆ ಒತ್ತಡ ಹೇರಿರುವ ಆರೋಪದಡಿ ಇಬ್ಬರು ಇಡಿ ಆಫೀಸರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮಿತ್ತಲ್ ಹಾಗೂ ಕಣ್ಣನ್ ವಿರುದ್ಧ ನಗರದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ್ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೇಷಾದ್ರಿಪುರಂ ಠಾಣೆಯಲ್ಲಿ ಎನ್​​ಸಿಆರ್​ ದಾಖಲಾಗಿದ್ದು, ವಿಲ್ಸನ್ ಗಾರ್ಡನ್ ಠಾಣೆಗೆ ವರ್ಗಾವಣೆ ಬಳಿಕ FIR ದಾಖಲಾಗಿದೆ.

ಯಾವುದೇ ತಪ್ಪು ಮಾಡದಿದ್ದರೂ ಕಾನೂನು ಬಾಹಿರವಾಗಿ ಇಡಿ ಅಧಿಕಾರಿ ವಿಚಾರಣೆ ಮಾಡಿದ್ದಾರೆ. ಬೈದು, ನನ್ನ ಮೇಲೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪ ಮಾಡಲಾಗಿದೆ.

ಎಂ.ಜಿ ರೋಡ್ ಖಾತೆಗೆ ಹಣವನ್ನು ಸಿಎಂ ಸಿದ್ದರಾಮಯ್ಯ, ನಾಗೇಂದ್ರ ಮತ್ತು ಎಫ್​​ಡಿ ನಿರ್ದೇಶನದಂತೆ ಮಾಡಿರುತ್ತೇನೆಂದು ಹೇಳುವಂತೆ ಒತ್ತಡ ಇತ್ತೆಂದು ಬರೆದು ಕೊಡುವಂತೆ ಸೂಚಿಸಿದ್ದು, ಸಿಎಂ, ನಾಗೇಂದ್ರ ಸೂಚನೆ ಇತ್ತೆಂದು ಒಪ್ಪಿಕೊ. ಒಪ್ಪಿಕೊಳ್ಳದಿದ್ರೆ ಬಂಧಿಸ್ತೇವೆಂದು ಭಯ ಹುಟ್ಟಿಸಿದ ಆರೋಪ ಮಾಡಲಾಗಿದೆ. ಹೀಗಾಗಿ FIR ದಾಖಲಾಗಿದೆ.

LEAVE A REPLY

Please enter your comment!
Please enter your name here