ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬ ಇರುವ ಹಿನ್ನೆಲೆ, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮಲ್ಲಿಗೆ ಕೆಜಿಗೆ 1,600 ರೂಪಾಯಿ ಇದೆ.
ನಾಳೆ ಶಾವ್ರಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿಂದಿನ ದಿನ ಮಾರುಕಟ್ಟೆಗೆ ಇಳಿಯುವ ಜನರು ಹೂವು ಹಣ್ಣಿನ ಬೆಲೆ ಕೇಳಿ ಶಾಕ್ ಆಗಿದ್ದಾರೆ.
ಮಲ್ಲಿಗೆ ಕೆಜಿಗೆ 1,600 ರೂಪಾಯಿ, ಸೇವಂತಿ 80-300 ರೂ., ಗುಲಾಬಿ 200-250 ರೂ., ಚೆಂಡು ಹೂವು 50-80 ರೂ., ಸುಗಂಧರಾಜ 300 ರೂ., ಕನಕಾಂಬರ 2,000 ರೂ., ಸೇವಂತಿಗೆ ಮಾರು 80-200 ರೂ., ಮಲ್ಲಿಗೆ ಹಾರ 1,500-2,000 ರೂ. ಹಾಗೂ ಬಾಳೆಕಂದು ಜೋಡಿ 100-150 ರೂ ಇದೆ.
ಹೂವು ಹಣ್ಣುಗಳಿಲ್ಲದೇ ಹಬ್ಬ ಮಾಡುವುದು ಅಸಾಧ್ಯ. ಹೀಗಾಗಿ ದರ ಹೆಚ್ಚಿದ್ದರೂ ಜನರಿಗೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ.