ಬೆಂಗಳೂರು:
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮೂರು ದಿನಗಳ ಭೇಟಿಗಾಗಿ ಡಿಸೆಂಬರ್ 29ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಡಿಸೆಂಬರ್ 29 ರ ಬೆಳಿಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆಗೆ ತೆರಳಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಮತ್ತು ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಮಧ್ಯಾಹ್ನ ರಾಜ ಭವನವನ್ನು ತಲುಪಲಿದ್ದಾರೆ. ಡಿಸೆಂಬರ್ 29 ಮತ್ತು 30 ರಂದು ಅಲ್ಲಿಯೇ ಇದ್ದು ಡಿಸೆಂಬರ್ 31 ರ ಬೆಳಿಗ್ಗೆ ಚೆನ್ನೈಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.