ಬೆಂಗಳೂರು:
ಸಿಲಿಕಾಲ್ ಸಿಟಿಯಲ್ಲಿ ರಸ್ತೆ ಮಧ್ಯೆ ಹುಡುಗರು ಹುಚ್ಚಾಟ ನಡೆಸಿರುವ ಘಟನೆ ನಗರದ ಎನ್ ಹೆಚ್ 7 ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದೆ.
ಹುಡುಗರು ಕಾರ್ ರೂಫ್ ಮೇಲೆ ಹತ್ತಿ ಡ್ಯಾನ್ಸ್ ಮಾಡುತ್ತಾ ಹಾಗೆ ಚಲಿಸುತ್ತಿರುವ ಕಾರಿನ ಮೇಲೆಯೇ ಬಟ್ಟೆ ಕಳಚಿ ಕೂಗಿ ಕೂಗಿಕೊಂಡು ಪುಂಡಾಟ ಮೆರೆದಿದ್ದಾರೆ.
ನಾಲ್ವರು ಯುವಕರಿಂದ ನಡು ರಸ್ತೆಯಲ್ಲಿ ಪುಂಡಾಟ ಮರರೆದಿದ್ದು DL 3cba9775 ನಂಬರಿನ ಕಾರಿನಲ್ಲಿದ್ದ ಯುವಕರು ಕುಡಿದ ಅಮಲಿನಲ್ಲಿ ಕಾರಿನ ರೂಫ್ ಹತ್ತಿ ಪುಂಡಾಟ ನಡೆಸಿದ್ದು ಹಿಂದೆ ಬರುತ್ತಿರುವ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈಗ ಎಲ್ಲೆಡೆ ವೈರಲ್ ಆಗಿದ್ದು ಪೊಲೀಸರು ಹುಡುಗರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.