ಗ್ಯಾಲೆ: ಶ್ರೀಲಂಕಾ ಕರಾವಳಿಯಲ್ಲಿ ಬುಧವಾರ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನ್ ಯುದ್ಧನೌಕೆ ಮೇಲೆ ದಾಳಿ ನಡೆಸಿದ್ದು, ಹಡಗು ಮುಳುಗಿ ಕನಿಷ್ಠ 87 ನಾವಿಕರು ಮೃತಪಟ್ಟಿದ್ದಾರೆ ಮತ್ತು ಡಜನ್ಗಟ್ಟಲೆ ಜನ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಆರಂಭವಾದ ಯುದ್ಧವು ಮಧ್ಯಪ್ರಾಚ್ಯದಾದ್ಯಂತ ಯುದ್ಧ ಹರಡುತ್ತಿರುವ ಸಮಯದಲ್ಲೇ ಈ ದುರಂತ ಸಂಭವಿಸಿದೆ.
“ಅಂತರರಾಷ್ಟ್ರೀಯ ನೀರಿನಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ ಇರಾನ್ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಟಾರ್ಪಿಡೊ ಮುಳುಗಿಸಿದೆ” ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಾಷಿಂಗ್ಟನ್ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಪೀಟ್ ಹೆಗ್ಸೆತ್ ಅವರು ಈ ದಾಳಿಯನ್ನು “ಮೌನ ಸಾವು” ಎಂದು ಕರೆದಿದ್ದು, ಎರಡನೇ ಮಹಾಯುದ್ಧದ ನಂತರ ಅಮೆರಿಕವು ಟಾರ್ಪಿಡೊದಿಂದ ಶತ್ರು ಹಡಗನ್ನು ಮುಳುಗಿಸಿದ ಮೊದಲ ಘಟನೆ ಇದಾಗಿದೆ. “ಆ ಯುದ್ಧದಂತೆ ಈ ಯುದ್ಧ” “ನಾವು ಗೆಲ್ಲಲು ಹೋರಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಶ್ರೀಲಂಕಾ ನೌಕಾಪಡೆಯು ದಕ್ಷಿಣ ನಗರದ ಗ್ಯಾಲೆ ಬಳಿಯ ನೀರಿನಿಂದ 87 ನಾವಿಕರ ಶವಗಳನ್ನು ಹೊರ ತೆಗೆದಿದೆ. ಆದರೆ 61 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
“ಇತರರಿಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ” ಎಂದು ನೌಕಾಪಡೆಯ ಅಧಿಕಾರಿಯೊಬ್ಬರು AFP ಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ವಿದೇಶಾಂಗ ಸಚಿವೆ ವಿಜಿತಾ ಹೆರಾತ್, ಶ್ರೀಲಂಕಾ ಪಡೆಗಳು ಇರಾನ್ ಯುದ್ಧನೌಕೆ ಐಆರ್ಐಎಸ್ ದೇನಾದಿಂದ 32 ನಾವಿಕರನ್ನು ರಕ್ಷಿಸಲಾಗಿದೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.
