ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳುವಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಜನರು ದುರ್ಮರಣಕ್ಕೆ ಈಡಾದ ಘಟನೆ ಹೊಸಪೇಟೆ ಹೊರ ವಲಯದ ವ್ಯಾಸನಕೇರಿ ಗ್ರಾಮದ ಬಳಿ ಸಂಜೆ ನಡೆದಿದೆ. ಹೊಸಪೇಟೆ ಉಕ್ಕಡ ಕೇರಿ ನಿವಾಸಿ ಗೋಣಿ ಬಸಪ್ಪ ಕುಟುಂಬ ಹರಪನಹಳ್ಳಿ ತಾಲೂಕಿನ ಕೂಲ್ಲಹಳ್ಳಿ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದರು,
ಇನ್ನೇನು ಐದಾರು ಕಿಲೋಮೀಟರ್ ಕ್ರಮಿಸಿದ್ದರೆ ಕುಟುಂಬ ಮನೆಯ ತಲುಪುತಿತ್ತು. ಅಷ್ಟರಲ್ಲೇ ಯಮ ಸ್ವರೂಪಿಯಲ್ಲಿ ಬಂದ ಎರಡು ಮೈನಿಂಗ್ ಟಿಪ್ಪರ್ ಲಾರಿಗಳು ಎದುರು ಬದುರಿಗೆ ಡಿಕ್ಕಿ ಹೊಡೆದಿವೆ. ಎರಡು ಡೈತ್ತ್ಯಾಕರಾದ ಲಾರಿಗಳ ಮದ್ಯೆ ಸಿಕ್ಕ ಮಹಿಂದ್ರಾ ಕಂಪನಿಯ XUV300 ವಾಹನ ನುಜ್ಜುಗೋಜ್ಜಗಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಏಳು ಜನ ಸ್ಥಳದಲ್ಲೇ ಸವಣ್ಣಪ್ಪಿದ್ದಾರೆ.
ಲಾರಿಯೊಂದರ ಎಕ್ಸಲ್ ಕಟ್ಟಾಗಿರೋದೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಸ್ಥಳದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟೊರೋದು ಒಂದೇಡೆಯಾದ್ರೇ ಮೃತ ದೇಹ ಹೊರ ತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಉಮಾ(45)
ಕೆಂಚವ್ವ(80)
ಭಾಗ್ಯ( 32)
ಅನಿಲ್(30)
ಗೋಣಿಬಸಪ್ಪ(65)
ಯುವರಾಜ(4)
ಭೀಮಲಿಂಗ(50)
ಎಂದುಮೃತರನ್ನ ಗುರುತಿಸಲಾಗಿದೆ.
ಸದ್ಯ ಗಂಭೀರವಾಗಿ ಗಾಯಗೊಂಡಿರೋ ಇಬ್ಬರನ್ನು ಸೇರಿದಂತೆ ಮೃತ ದೇಹಗಳನ್ನು ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
The post Vijayanagara: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಏಳು ಜನರ ದುರ್ಮರಣ appeared first on Ain Live News.
