Home ಅಪರಾಧ Vijayapura | Private bus catches fire after burst tire: Passengers escape |...

Vijayapura | Private bus catches fire after burst tire: Passengers escape | ಟಯರ್ ಸ್ಫೋಟಗೊಂಡು ಬೆಂಕಿಗಾಹುತಿಯಾದ ಖಾಸಗಿ ಬಸ್: ಪ್ರಯಾಣಿಕರು ಪಾರು

31
0
Vijayapura | Private bus catches fire after burst tire: Passengers escape

ವಿಜಯಪುರ:

ಖಾಸಗಿ ಬಸ್ಸೊಂದು ಚಲಿಸುತ್ತಿದ್ದ ವೇಳೆ ಅದರ ಟಯರ್ ಸ್ಫೋಟಗೊಂಡು ಬಳಿಕ ಬಸ್ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಬಳಿ ಇಂದು ಮುಂಜಾನೆ ನಡೆದಿದೆ.

ಘಟನೆಯಲ್ಲಿ ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಜನತಾ ಟ್ರಾವೆಲ್ಸ್ಗೆ ಸೇರಿದ ಈ ಬಸ್ ಬೆಂಗಳೂರಿಂದ ವಿಜಯಪುರಕ್ಕೆ ಬರುತ್ತಿತ್ತು. ಹಿಟ್ಟಿನಹಳ್ಳಿ ಬಳಿ ತಲುಪಿದಾಗ ಬಸ್ಸಿನ ಟಯರ್ ಸ್ಫೋಟಗೊಂಡಿದೆ. ತಕ್ಷಣ ಚಾಲಕ ಬಸ್ಸನ್ನು ನಿಲ್ಲಿಸಿದ್ದು, ಪ್ರಯಾಣಿಕರೆಲ್ಲ ಕೆಳಗೆ ಇಳಿದಿದ್ದರು. ಅಷ್ಟರಲ್ಲಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಇಡೀ ಬಸ್ಸನ್ನು ಆವರಿಸಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರ ಎಲ್ಲ ಲಗೇಜ್ ಗಳು ಬೆಂಕಿಗಾಹುತಿ ಆಗಿವೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here