Home Uncategorized Viral News: ಅಂಗಡಿಯಿಂದ ದಿಢೀರನೆ ಸಿಸಿಟಿವಿ ಕ್ಯಾಮೆರಾಗಳು ನಾಪತ್ತೆ; ಕೊನೆಗೂ ಬಯಲಾಯ್ತು ಕಪಿ ಚೇಷ್ಟೆ!

Viral News: ಅಂಗಡಿಯಿಂದ ದಿಢೀರನೆ ಸಿಸಿಟಿವಿ ಕ್ಯಾಮೆರಾಗಳು ನಾಪತ್ತೆ; ಕೊನೆಗೂ ಬಯಲಾಯ್ತು ಕಪಿ ಚೇಷ್ಟೆ!

46
0

ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯ (Kanyakumari) ಅಂಗಡಿಯೊಂದರಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳೇ ನಾಪತ್ತೆಯಾಗುತ್ತಿದ್ದವು. ಇದು ಕಳ್ಳರ ಕೈ ಚಳಕ ಇರಬಹುದು ಎಂದುಕೊಂಡು ಮಾಲೀಕ ಆ ಕಳ್ಳತನ ಸುಳಿವೇನಾದರೂ ಗೊತ್ತಾಗಬಹುದು ಎಂದು ಸಿಸಿಟಿವಿ (CCTV Camera) ಕಳುವಾಗುವುದಕ್ಕೂ ಮೊದಲಿನ ಫೂಟೇಜ್​​ಗಳನ್ನೆಲ್ಲ ನೋಡುತ್ತಿದ್ದಾಗ ಆಘಾತಕಾರಿ ವಿಷಯ (Shocking News) ಬೆಳಕಿಗೆ ಬಂದಿದೆ. ಅಂಗಡಿಯ ಹೊರಗೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಕದಿಯುತ್ತಿದ್ದುದು ಕೋತಿ ಎಂಬುದು ಗೊತ್ತಾಗಿ ಆ ಮಾಲೀಕ ಶಾಕ್ ಆಗಿದ್ದಾರೆ.

ಕನ್ಯಾಕುಮಾರಿಯ ಪ್ಲೈವುಡ್ ಅಂಗಡಿಯ ಮಾಲೀಕ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ, ಅಂಗಡಿಯಲ್ಲಿ ಕಳ್ಳತನವನ್ನು ತಪ್ಪಿಸಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಒಂದರ ಹಿಂದೆ ಒಂದರಂತೆ ಕಳ್ಳತನವಾಗುತ್ತಿರುವುದನ್ನು ಕಂಡು ಅವರು ಅಚ್ಚರಿಗೊಂಡಿದ್ದರು. ಆ ಅಂಗಡಿಯಲ್ಲಿ ಬೇರಾವ ವಸ್ತುವೂ ಕಳ್ಳತನವಾಗಿರಲಿಲ್ಲ. ಆದರೆ, ಸಿಸಿಟಿವಿ ಕ್ಯಾಮೆರಾಗಳು ಮಾತ್ರ ನಿಗೂಢವಾಗಿ ಕಾಣೆಯಾಗುತ್ತಿತ್ತು.

ಇದನ್ನೂ ಓದಿ: ಹುಲಿಯೊಂದಿಗೆ ಮೈಂಡ್​ ಗೇಮ್ ಆಡಿ ಪ್ರಾಣ ಉಳಿಸಿಕೊಂಡ ಜಾಣಕೋತಿ!

ಇದರಿಂದ ಗೊಂದಲಕ್ಕೊಳಗಾದ ಮಾಲೀಕರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರು. ಆಗ ಕಳ್ಳತನವಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಒಂದರಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಎತ್ತಿಕೊಂಡು ಹೋಗುವುದಕ್ಕೂ ಮೊದಲು ಕೋತಿಯ ಮುಖ ಸೆರೆಯಾಗಿತ್ತು. ಅದನ್ನು ನೋಡಿದ ಮಾಲೀಕ ತನ್ನ ಅಂಗಡಿಯ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕದಿಯುತ್ತಿದ್ದ ಕಳ್ಳ ಕೋತಿಯೆಂದು ತಿಳಿದು ಅಚ್ಚರಿ ಪಟ್ಟಿದ್ದಾರೆ.

ಇದನ್ನೂ ಓದಿ: ಕಿಡ್ನ್ಯಾಪರ್ ಬಂದಿದ್ದಾರೆ ಎಚ್ಚರ; ಸಿಂಹದಮರಿಯನ್ನು ಅಪಹರಿಸಿದ ಕೋತಿ

ಸಿಸಿಟಿವಿಯನ್ನು ಕೋತಿ ಕದಿಯುವುದಕ್ಕೂ ಮೊದಲೇ ಆ ಕೋತಿಯ ಮುಖ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಮಾಲೀಕರು ಅದನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಅಂದಹಾಗೆ, ಆ ಮಾಲಿಕರು ಇದುವರೆಗೆ 13 ಸಿಸಿಟಿವಿ ಕ್ಯಾಮೆರಾಗಳನ್ನು ಕಳೆದುಕೊಂಡಿದ್ದಾರೆ! ಹೊಸ ಸಿಸಿಟಿವಿ ಕ್ಯಾಮೆರಾವನ್ನು ಹಾಕಿದಾಗಲೆಲ್ಲ ಕೋತಿ ಆ ಸಿಸಿಟಿವಿ ಕ್ಯಾಮೆರಾಗಳನ್ನು ಕದಿಯುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here