Home Uncategorized Viral Video: ಘೇಂಡಾಮೃಗವು ಮಗುವಿಗೆ ಜನ್ಮ ನೀಡುವ ಅಪರೂಪದ ವೀಡಿಯೋ ವೈರಲ್

Viral Video: ಘೇಂಡಾಮೃಗವು ಮಗುವಿಗೆ ಜನ್ಮ ನೀಡುವ ಅಪರೂಪದ ವೀಡಿಯೋ ವೈರಲ್

30
0

ಆಫ್ರಿಕಾದ ರಾಷ್ಟ್ರೀಯ ಉದ್ಯಾನವನದಲ್ಲಿ ತಾಯಿ ಘೇಂಡಾಮೃಗವು ತನ್ನ ಮಗುವಿಗೆ ಜನ್ಮ ನೀಡುತ್ತಿರುವುದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೋ ಸಾಕಷ್ಟು ಮಟ್ಟಿಗೆ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು 1.2 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದುವರೆಗೆ 2,267 ಮಂದಿ ಟ್ವೀಟ್ ಲೈಕ್ ಮಾಡಿದ್ದಾರೆ. ಇದಲ್ಲದೇ ಸಾಕಷ್ಟು ಜನರು ವೀಡಿಯೊಗೆ ಪ್ರತಿಕ್ರಿಯೆಯಾಗಿ, ವೀಕ್ಷಕರು ವ್ಯಾಪಕವಾದ ಅಭಿಪ್ರಾಯಗಳನ್ನು ನೀಡಿದ್ದಾರೆ. ಇದಲ್ಲದೇ ಯೂಟ್ಯೂಬ್‌ನಲ್ಲಿಯೂ ಸಾಕಷ್ಟು ಮಟ್ಟಕ್ಕೆ ಸುದ್ದಿ ಮಾಡಿದೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಘೇಂಡಾಮೃಗವು ಮಗುವಿಗೆ ಜನ್ಮ ನೀಡುತ್ತಿದೆ. ಇದು ಸಾಕಷ್ಟು ನೆಟ್ಟಿಗರಲ್ಲಿ ಕಣ್ಣೀರು ತರಿಸಿದೆ. ಪ್ರಾಣಿಯೇ ಆಗಿರಲಿ ಅಥವಾ ಮನುಷ್ಯನೇ ಆಗಿರಲಿ ತಾಯಿ ಮಗುವಿಗೆ ಜನ್ಮ ನೀಡುವಾಗ ಎಷ್ಟರ ಮಟ್ಟಿಗೆ ನೋವನ್ನುನ ಅನುಭವಿಸುತ್ತಾಳೆ ಎಂದು ಈ ವಿಡಿಯೋದ ಮೂಲಕ ತಿಳಿದು ಬಂದಿದೆ.

ಘೇಂಡಾಮೃಗವು ಮಗುವಿಗೆ ಜನ್ಮ ನೀಡುವ ಅಪರೂಪದ ವೀಡಿಯೋ  ಇಲ್ಲಿದೆ

It’s a rare to get sight such precious moments. A new life, after 16 to 18 months of gestation – #mother #Rhino

The multiple threats for its survival has made these critically endangered species as a population that needs highest protection & conservatiopic.twitter.com/9FQvzNeiGJ

— Sudha Ramen (@SudhaRamenIFS) December 19, 2022

ಆಫ್ರಿಕಾದ ಉಗಾಂಡಾ ಮೂಲದ ಇಕೋ-ಟೂರ್ ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೋವನ್ನುIFS ಅಧಿಕಾರಿ ಸುಧಾ ರಾಮೆನ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಇಂತಹ ಅಮೂಲ್ಯ ಕ್ಷಣಗಳು ಸಿಗುವುದು ಅಪರೂಪ. 16 ರಿಂದ 18 ತಿಂಗಳ ಗರ್ಭಾವಸ್ಥೆಯ ತಾಯಿ ಘೇಂಡಾಮೃಗದ ನಂತರ ಹೊಸ ಜೀವನ. ಅದರ ಉಳಿವಿಗಾಗಿ ಬಹು ಬೆದರಿಕೆಗಳು ಈ ವಿಮರ್ಶಾತ್ಮಕವಾಗಿ ಅಳಿವಿನಂಚಿನಲ್ಲಿರುವ ಜಾತಿಗಳನ್ನು ಹೆಚ್ಚಿನ ರಕ್ಷಣೆ ಮತ್ತು ಸಂರಕ್ಷಣೆಯು ಅಗತ್ಯವಿದೆ ಎಂದು ವೀಡಿಯೊದ ಶೀರ್ಷಿಕೆಯನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: ತಂದೆ ಜತೆ ಸ್ಕೂಟಿಯಲ್ಲಿ ಕುಳಿತಿದ್ದ ಮಗು ಮಾಡಿದ ಕೆಲಸ ನೋಡಿ, ಯಾಮಾರಿದ್ರೆ ಜೀವಕ್ಕೆ ಕಂಟಕ

ಈ ವಿಡಿಯೋಗೆ ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು, ಇಂತಹ ಅಪರೂಪದ ಸಂದರ್ಭಗಳು ನೋಡಲು ಸಿಗುವುದು ಬಹು ಅಪರೂಪ ಎಂದು ಕಾಮೆಂಟ್ ಮಾಡಿದ್ದಾರೆ. ಪ್ರಾಣಿ ಪ್ರಿಯರಂತೂ ಸಾಕಷ್ಟು ಮಟ್ಟಿಗೆ ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here