Home Uncategorized Viral Video: ದಂಡದಿಂದ ಪಾರಾಗಲು ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು, 4 ಕಿ.ಮೀ ಎಳೆದುಕೊಂಡು...

Viral Video: ದಂಡದಿಂದ ಪಾರಾಗಲು ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು, 4 ಕಿ.ಮೀ ಎಳೆದುಕೊಂಡು ಹೋದ ಚಾಲಕ

32
0

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore) ಚಲನ್​ನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕನೊಬ್ಬ ಟ್ರಾಫಿಕ್ ಪೋಲೀಸ್ ಅನ್ನು ತನ್ನ ಕಾರಿನ ಬಾನೆಟ್ ಮೇಲೆ ಹಾಕಿಕೊಂಡು, ಸುಮಾರು 4 ಕಿ.ಮೀ.ವರೆಗೆ ಎಳೆದುಕೊಂಡು ಹೋಗಿದ್ದಾನೆ. ಆ ಕಾರು ಚಾಲಕ ಕಾರನ್ನು ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಟ್ರಾಫಿಕ್ ಪೊಲೀಸ್ ದಂಡವನ್ನು ಹಾಕಲು ಅಡ್ಡಗಟ್ಟಿದ್ದರು. ಆಗ ಟ್ರಾಫಿಕ್ ಪೊಲೀಸ್​ನಿಂದ (Traffic Police) ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆತ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಆ ವೇಳೆ ಆ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.

ದಂಡ ಪಾವತಿಸದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕಾರು ಚಾಲಕ ಟ್ರಾಫಿಕ್ ಪೊಲೀಸ್ ಅನ್ನು ಎಳೆದುಕೊಂಡು ಹೋಗುತ್ತಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇಂದೋರ್​​ನ ಜನನಿಬಿಡ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದ್ದು, ಚಾಲಕನ ವೇಗದ ಚಾಲನೆಯಿಂದಾಗಿ ಪೊಲೀಸರು ಪ್ರಾಣಾಪಾಯದಿಂದ ಕಾರಿನ ಮುಂಭಾಗದಲ್ಲಿ ಬಿದ್ದು ನೇತಾಡುತ್ತಿರುವುದನ್ನು ನೋಡಬಹುದು.

#WATCH मध्य प्रदेश: इंदौर में एक कार चालक ने एक ट्रैफिक सिपाही को कार के बोनट पर घसीटा। वीडियो CCTV का है। pic.twitter.com/V4I0lov8Xv

— ANI_HindiNews (@AHindinews) December 12, 2022

ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ಆಯಿಲ್ ಸುರಿದು ಅದರ ಮಾಲೀಕನ ಗಮನ ಅದರತ್ತ ಸೆಳೆದ ಕಳ್ಳರು 18 ಲಕ್ಷ ರೂ. ಹಾರಿಸಿಕೊಂಡು ಪರಾರಿಯಾದರು!

“ಫೋನಿನಲ್ಲಿ ಮಾತನಾಡುತ್ತಾ ಕಾರನ್ನು ಓಡಿಸುತ್ತಿದ್ದ ವ್ಯಕ್ತಿಯನ್ನು ನಾನು ನಿಲ್ಲಿಸಿದೆ. ನಾನು ಚಲನ್ ಪಾವತಿಸಲು ಕೇಳಿದೆ. ಆದರೆ ಅವನು ಪಾವತಿಸಲು ನಿರಾಕರಿಸಿದನು. ಆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು. ನಾನು ಅವನ ಕಾರಿನ ಎದುರು ಹೋಗಿ ತಡೆಯಲು ಪ್ರಯತ್ನಿಸಿದಾಗ ನಾನು ಬಾನೆಟ್ ಮೇಲೆ ಬಿದ್ದೆ. ಆಗ ಆತ ನನ್ನನ್ನು ಸುಮಾರು 4ವರೆಗೆ ಎಳೆದುಕೊಂಡು ಹೋದ” ಎಂದು ಶಿವ ಸಿಂಗ್ ಚೌಹಾಣ್ ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here