ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ 19ನೇ ಐಪಿಎಲ್ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ. ಅವರು IPL ನಲ್ಲಿ ದಾಖಲೆಯ 8ನೇ ಶತಕ ಬಾರಿಸಿದರು.
ಕೊಹ್ಲಿ ಹಾಗೂ ನಾಯಕ ಎಫ್‌ಡು ಪ್ಲೆಸಿಸ್ ನೀಡಿದ ಉತ್ತಮ ಆರಂಭದಿಂದ RCB ತಂಡ ರಾಜಸ್ತಾನ್ ರಾಯಲ್ಸ್ ಗೆಲುವಿಗೆ 184 ರನ್ ಗುರಿ ನೀಡಿದೆ.
ಕೊಹ್ಲಿ 72 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ 113 ರನ್ ಬಾರಿಸಿದರು.
ನಾಯಕ ಎಫ್‌ಡು ಪ್ಲೆಸಿಸ್(44 ರನ್, 33 ಎಸೆತ) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಮೊದಲ ವಿಕೆಟ್‌ಗೆ 125 ರನ್ ಜೊತೆಯಾಟ ನಡೆಸಿ ಆರ್‌ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟರು.