ಬೆಂಗಳೂರು:
ಆರ್ ಎಸ್ ಎಸ್ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನರಾಗಿದ್ದಾರೆ.
ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರು ನಿನ್ನೆ (ಜನವರಿ 22) ರಾತ್ರಿ 10ಕ್ಕೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 10ರಿಂದ ವಿಶ್ವ ಹಿಂದು ಪರಿಷತ್ ನ ರಾಜ್ಯ ಕೇಂದ್ರ ಕಾರ್ಯಾಲಯ ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅವರು 1949 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು.
ಬಾಬುರಾವ್ ದೇಸಾಯಿ ಅವರು 70 ವರ್ಷ ಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಅವರು, ಕನ್ನಡ, ಹಿಂದಿ, ಕೊಂಕಣಿ, ಮರಾಠಿ,ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಹೊಂದಿದ್ದರು. ಪೋರ್ಚುಗೀಸ್, ಫ್ರೆಂಚ್ ಭಾಷೆಯನ್ನು ಅರಿತಿದ್ದ ಅವರು, ವಿಶ್ವ ಹಿಂದೂ ಪರಿಷದ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ, ಆಂಧ್ರ ಕರ್ನಾಟಕ ಸೇರಿದಂತೆ ಕ್ಷೇತ್ರೀಯ ಕಾರ್ಯದರ್ಶಿ, ಅಖಿಲ ಭಾರತೀಯ, ಕಾರ್ಯದರ್ಶಿ, ರಾಮ ಜನ್ಮ ಭೂಮಿ ಆಂದೋಲನದ ನೇತೃತ್ವ ಹೀಗೆ ಆನೇಕ ಜವಾಬ್ದಾರಿ ನಿರ್ವಹಿಸಿದ್ದರು.
ದೇಸಾಯಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಏಳು ದಶಕಗಳಿಂದ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ಬಾಬುರಾವ್ ದೇಸಾಯಿ ನಿಧನರಾದ ಸುದ್ಧಿ ಅತೀವ ದುಃಖವನ್ನುಂಟುಮಾಡಿದೆ. ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಮ ಜನ್ಮಭೂಮಿ ಆಂದೋಲನ ಸೇರಿದಂತೆ ಅನೇಕ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರಿಗೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಓಂ ಶಾಂತಿ pic.twitter.com/UVTCYsOOTf
— B.S. Yediyurappa (@BSYBJP) January 23, 2021