ಬೆಂಗಳೂರು:
ಕನ್ನಡನಾಡಿನಲ್ಲಿ ಡಬಲ್ ಎಂಜಿನ್ ಸರಕಾರ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ತುಮಕೂರಿನಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿಜಯ ಸ್ಪಷ್ಟವಾಗಿದೆ. ಭಾರತ್‍ಮಾತಾಕಿ, ಬಜರಂಗಬಲಿಗೆ ಜೈ ಎಂದು ತಿಳಿಸಿದರು. ರಾಷ್ಟ್ರಪತಿ ಕುವೆಂಪು ಅವರು ‘ಓ ಲಂಕಾ ಭಯಂಕರ, ಹೇ ಆಂಜನೇಯ’ ಎಂಬ ಪಂಕ್ತಿಗಳನ್ನು ಬರೆದಿದ್ದರು. ಅದೇ ನೆಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಜರಂಗಬಲಿ ಎನ್ನುವುದೂ ಆತಂಕದ ವಿಷಯವಾಗಿದೆ. ಕಾಂಗ್ರೆಸ್ ಗುಲಾಮರ ಪರವಿದೆ. ಅದು ಕರ್ನಾಟಕದ ವಿಕಾಸ ಮಾಡಲು ಸಾಧ್ಯವಿಲ್ಲ.
ಕಾಂಗ್ರೆಸ್- ಜೆಡಿಎಸ್ ಆಟ ಜನರಿಗೆ ಮನವರಿಕೆಯಾಗಿದೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳಿಗೆ ಮತ ಕೊಟ್ಟರೆ ಅದು ಅಸ್ಥಿರ ಸರಕಾರಕ್ಕೆ ಕಾರಣವಾಗಲಿದೆ. ಆದ್ದರಿಂದ ಏಕೈಕ ಮಂತ್ರ ಈ ಬಾರಿಯ ನಿರ್ಧಾರ ಬಿಜೆಪಿ ಬಹುಮತದ ಸರಕಾರ ಎಂದಿರಬೇಕು ಎಂದು ಮನವಿ ಮಾಡಿದರು. ಬಿಜೆಪಿ ಸಂಕಲ್ಪ ಪತ್ರಕ್ಕೆ ಬಹಳ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕಳೆದ 9 ವರ್ಷಗಳಲ್ಲಿ ಗ್ರಾಮ, ರೈತರು, ಬಡವರ ಏಳಿಗೆಗೆ 7 ದಶಕಗಳಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಂದ ಹೆಚ್ಚು ವಿಕಾಸ ನಡೆದಿದೆ. ಕಾಂಗ್ರೆಸ್- ಜೆಡಿಎಸ್ ಲೂಟಿಕೋರ ಪಕ್ಷಗಳು. ಜನರ ಖರೀದಿ ಸಾಮಥ್ರ್ಯ ಹೆಚ್ಚಳ, ಜೀವನಮಟ್ಟ ಸುಧಾರಣೆಗೆ ಬಿಜೆಪಿ ಶ್ರಮಿಸಿದೆ ಎಂದು ವಿವರಿಸಿದರು.
ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ನೇರವಾಗಿ ಖಾತೆಗೆ ತಲುಪಿಸಿದ್ದೇವೆ. ಅದರಲ್ಲಿ ಲೂಟಿ ಇರಲಿಲ್ಲ. ಬಿಜೆಪಿ ಸರಕಾರದ ಪ್ರಯತ್ನದಿಂದ 9 ಕೋಟಿ ಮಹಿಳೆಯರನ್ನು ಸೆಲ್ಫ್ ಹೆಲ್ಪ್ ಗ್ರೂಪಿನಲ್ಲಿ ಸೇರಲು ಸಾಧ್ಯವಾಗಿದೆ. ಎಫ್‍ಪಿಒಗಳ ಸಬಲೀಕರಣದ ಮೂಲಕ ರೈತರಿಗೆ ಪ್ರಯೋಜನವಾಗುತ್ತಿದೆ ಎಂದರು.
ಅತ್ಯಂತ ಕಡಿಮೆ ದರದಲ್ಲಿ ರಸಗೊಬ್ಬರವನ್ನು ನೀಡುತ್ತಿದ್ದೇವೆ. 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. 3 ಕೋಟಿಗೂ ಹೆಚ್ಚು ಮನೆಗಳನ್ನು ಗ್ರಾಮಗಳಲ್ಲಿ ನಿರ್ಮಾಣವಾಗಿವೆ. ಈ ಮನೆಗಳ ಮಾಲೀಕರ ಹಕ್ಕನ್ನು ಮಹಿಳೆಯರಿಗೆ ನೀಡಿದ್ದೇವೆ ಎಂದು ತಿಳಿಸಿದರು. ಎಲ್ಲವೂ ಪುರುಷರ ಸ್ವಾಮ್ಯ ಎಂಬುದನ್ನು ಮೋದಿ ಬದಲಿಸಿದ್ದಾರೆ ಎಂದು ವಿವರಿಸಿದರು.
ಕಲ್ಪತರು ನಾಡಿನ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠಗಳ ಸ್ವಾಮೀಜಿಗಳಿಗೆ ನಮಸ್ಕಾರಗಳು ಎಂದು ತಿಳಿಸಿದರು.
ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಮೋದಿಜಿ ಅವರು ದೇಶವನ್ನು ವಿಶ್ವಮಾನ್ಯ ದೇಶವಾಗಿ ಮಾಡಿದ್ದಾರೆ ಎಂದು ತಿಳಿಸಿದರು. ಜನೌಷಧಿ, ಜನ್‍ಧನ್, ಶೌಚಾಲಯ ಮತ್ತಿತರ ಜನಪರ ಯೋಜನೆಗಳನ್ನು ಉಲ್ಲೇಖಿಸಿದರು. ಕರ್ನಾಟಕದಲ್ಲಿ ಬಹುಮತದ ಸರಕಾರ ಕೊಡಿ ಎಂದು ಕೇಳಲು ನರೇಂದ್ರ ಮೋದಿಜಿ ಅವರು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು. ಬೂತ್ ಗೆಲ್ಲಿಸಿಕೊಡಿ ಎಂಬ ಪ್ರಧಾನಿಯವರ ಮಾತಿಗೆ ಸ್ಪಂದಿಸಿ ಎಂದು ಮನವಿ ಮಾಡಿದರು. ಪಕ್ಷದ ಅಭ್ಯರ್ಥಿಗಳು, ಮುಖಂಡರು ಇದ್ದರು.