ಮಧ್ಯಪ್ರಾಚ್ಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿದ್ದು ಕೊಲ್ಲಿ ರಾಷ್ಟ್ರಗಳಲ್ಲಿ ಸಹ ಯುದ್ದದ ಭೀತಿ ಆವರಿಸಿದೆ.
ಹಾರ್ಮುಜ್ ಮೂಲಕ ಸಾಗಬೇಕಿದ್ದ ಬೃಹತ್ ಕಂಟೇನರ್ ಹೊತ್ತ ಹಡಗುಗಳ ಸಂಚಾರ ಬಹುತೇಕ ಬಂದ್ ಆಗಿದೆ.
ಇದರ ಪರಿಣಾಮ ಇದೀಗ ಜಿಲ್ಲೆಯ ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಮೇಲೆ ಸಹ ಉಂಟಾಗಿದೆ.
ಕೆಲವು ಮುಂಬೈ ಮತ್ತು ಚೆನ್ನೈ ಬಂದರಿನಲ್ಲಿ ನಿಂತಿವೆ. ಪರಿಣಾಮ ನೂರಾರು ಕೋಟಿ ರೂಪಾಯಿ ಮೌಲ್ಯದ ಮೆಣಸಿಕಾಯಿ ಕಂಟೇನರ್ಗಳಲ್ಲಿಯೇ ಉಳಿದಿದೆ.
ಇತ್ತ ಇರಾನ್ನಿಂದ ಬ್ಯಾಡಗಿ ವರ್ತಕರಿಗೆ ಬರಬೇಕಾಗಿದ್ದ ಕೋಟ್ಯಂತರ ರೂಪಾಯಿ ಹಣವೂ ಸಂದಾಯವಾಗಿಲ್ಲ.
ಇದರಿಂದಾಗಿ ಬ್ಯಾಡಗಿ ಮೆಣಸಿನಕಾಯಿ ವರ್ತಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನುತ್ತಾರೆ ವರ್ತಕ ಎಸ್.ಆರ್. ಪಾಟೀಲ್. ವಿಡಿಯೋ ಇಲ್ಲಿದ ನೋಡಿ.
