ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ.
ಇಂಪ್ಯಾಕ್ಟ್ ಶೃಂಗಸಭೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ವ್ಯಾಪಕವಾಗಿ ಟೀಕಿಸುತ್ತಿರುವಂತೆಯೇ ಸಂಸದ ಶಶಿ ತರೂರ್ ಶೃಂಗಸಭೆಯನ್ನು ಬೆಂಬಲಿಸಿ ಮಾತನಾಡಿದ್ದಾರೆ.
ನಾರಾಯಣ ಗುರುಗಳ ಕುರಿತಾದ ತಮ್ಮ ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ವರದಿಗಾರರ ಪ್ರಶ್ನೆಗೆ ತರೂರ್ ಪ್ರತಿಕ್ರಿಯಿಸಿದರು.
ಮೊದಲ ಎರಡು ದಿನಗಳು ‘ಈ ಕಾರ್ಯಕ್ರಮ ಅತ್ಯಂತ ಚೆನ್ನಾಗಿ ನಡೆದಿದೆ. ಯಾವುದೇ ದೊಡ್ಡ ಕಾರ್ಯಕ್ರಮದಲ್ಲಿ ಕೆಲವು ಲೋಪಗಳು ಆಗುವುದು ಸಾಮಾನ್ಯ’ ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
