ಬೆಂಗಳೂರು:
ಹಿಡಕಲ್ ಜಲಾಶಯದಿಂದ ಘಟಪ್ರಭ ಬಲದಂಡೆ ಕಾಲುವೆಗಳಿಗೆ 2,000 ಕ್ಯೂಸೆಕ್ಸ್ ನೀರು ಹಾಗೂ ಘಟಪ್ರಭ ಎಡದಂಡೆ ಕಾಲುವೆಗಳಿಗೆ 2,400 ಕ್ಯೂಸೆಕ್ಸ್ ನೀರನ್ನು ಮಾರ್ಚ್ 10ರಿಂದ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ರೈತರ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗಲು ಹಿಡಕಲ್ ಬಲಾಶಯದಿಂದ ಘಟಪ್ರಭ ಬಲದಂಡೆ ಕಾಲುವೆಗಳಿಗೆ 20 ದಿನಗಳ ಅವಧಿಯವರೆಗೆ ಹಾಗೂ ಘಟಪ್ರಭ ಎಡದಂಡೆ ಕಾಲುವೆಗಳಿಗೆ 15 ದಿನಗಳ ಅವಧಿಯವರೆಗೆ ನೀರನ್ನು ಬಿಡಲಾಗುವುದು. ಈಗಾಗಲೇ ಬಿಸಿಲು ಹೆಚ್ಚಳವಾಗಿರುವುದರಿಂದ ರೈತರ ಬೆಳೆಗಳಿಗೆ ಪೂರಕವಾಗಿ ನೀರನ್ನು ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಭಾಗದ ರೈತರು ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಮಿತವಾಗಿ ಉಪಯೋಗಿಸಬೇಕು ಎಂದು ಶ್ರೀ ಗೋವಿಂದ ಎಂ ಕಾರಜೋಳ ಅವರು ಮನವಿ ಮಾಡಿದ್ದಾರೆ.