Home ಬೆಂಗಳೂರು ನಗರ ‘ಬೆಂಗಳೂರುವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಿಬೇಕು’

‘ಬೆಂಗಳೂರುವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಿಬೇಕು’

126
0

ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021″ರ ಅಂಗವಾಗಿ Cleanliness For Peace ಜಾಥಾ ಕಾರ್ಯಕ್ರಮ

ಬೆಂಗಳೂರು:

ಮಹಾತ್ಮ ಗಾಂಧೀಜಿಯವರ ಜೀವನದ ಮುಖ್ಯವಾದ ಅಂಶ ಸ್ವಚ್ಛತೆಯಾಗಿತ್ತು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಿ ಕೆಲಸಮಾಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಕ್ತ ಆಯುಕ್ತರು ಪಿ.ಜಿ.ಆರ್.ಸಿಂಧ್ಯ ರವರು ತಿಳಿಸಿದರು.

ಬಿಬಿಎಂಪಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸ್ವಚ್ಛ ಸರ್ವೇಕ್ಷಣ್ ಅಭಿಯಾದ ಅಂಗವಾಗಿ ಸ್ವಚ್ಛತೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಇಂದು ಶಾಂತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಭಿಯಾನರ ಅಂಗವಾಗಿ ಇಂದು ಮಹಾತ್ಮಾ ಗಾಂಧೀಜಿ ಉದ್ಯಾನವನದಿಂದ ಹಮ್ಮಿಕೊಂಡಿರುವ Cleanliness For Peace ಜಾಥಾ ಕಾರ್ಯಕ್ರಮಕ್ಕೆ ರಾಜ್ಯ ಮುಕ್ತ ಆಯುಕ್ತರು (ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್) ಪಿ.ಜಿ.ಆರ್.ಸಿಂಧ್ಯ ರವರು ಚಾಲನೆ ನೀಡಿದರು.

ಈ ವೇಳೆ ವಿಶೇಷ ಆಯುಕ್ತರು (ಘನತ್ಯಾಜ್ಯ) ಡಿ. ರಂದೀಪ್, ವಿಶೇಷ ಆಯುಕ್ತರು(ಕಲ್ಯಾಣ) ರವೀಂದ್ರ, ಜಂಟಿ ಆಯುಕ್ತರು (ಪೂರ್ಣ) ಪಲ್ಲವಿ, ಮುಖ್ಯ ಇಂಜಿನಿಯರ್(ಘನತ್ಯಾಜ್ಯ) ವಿಶ್ವನಾಥ್, ಅಧೀಕ್ಷಕ ಇಂಜಿನಿಯರ್ ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಗರದಲ್ಲಿ 60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರೆಲ್ಲರಲ್ಲೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಅವರ ಜೀವನದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವ ಹಾಗೆ ಮಾಡುವುದು ಸ್ಕೌಟ್ಸ್ ಮತ್ತು ಗೈಡ್ಸ್ ನ ಧ್ಯೇಯವಾಗಿದೆ ಎಂದು ಸಿಂಧ್ಯ ರವರು ತಿಳಿಸಿದರು.

ವಿಶೇಷ ಆಯುಕ್ತರು ರಂದೀಪ್ ರವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯದಂತೆ ಎಲ್ಲರೂ ಶಾಂತಿ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅದರಂತೆ ಎಲ್ಲರೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ತಮ್ಮ ಸುತ್ತಮತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಸ್ವಚ್ಚತೆ ಕಾಪಾಡುವುದು ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಅಧಿಕಾರಿಗಳ ಜೊತೆ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಾಗ ಸ್ವಚ್ಛ ಸುಂದರ ನಗರವನ್ನಾಗಿ ಮಾಡಬಹುದು ಎಂದರು.

ನಗರ ಸ್ವಚ್ಛವಾಗಿರಬೇಕಾದರೆ ಎಲ್ಲರೂ ಸಮರ್ಪಕವಾಗಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಬೇರ್ಪಡಿಸಿ ಕೊಡಬೇಕು. ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣ ತ್ಯಜಿಸಬೇಕು. ಸ್ವಚ್ಛ ಬೆಂಗಳೂರಿಗಾಗಿ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು. ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಂಡು ನಗರದ ಪರವಾಗಿ ಉತ್ತಮ ಪ್ರತಿಕ್ರಿಯೆಗಳನ್ನು ನೀಡಿದಾಗ ಬೆಂಗಳೂರಿಗೆ ಉತ್ತಮ ಅಂಕ ಸಿಗಲಿದೆ ಎಂದು ಹೇಳಿದರು.

ಜಾಥಾ ಪ್ರಾರಂಭಕ್ಕೂ ಮುನ್ನ ಸ್ವಚ್ಚ ಸರ್ವೇಕ್ಷಣ್ ಪ್ರಮಾಣ ವಚನ ಸ್ವೀಕರಿಸಲಾಯಿತು.

ಜಾಥಾ ಸಾಗಿದ ಮಾರ್ಗ: ಮಹಾತ್ಮಾ ಗಾಂಧೀಜಿ ಉದ್ಯಾನವನದಿಂದ – ವಿಶ್ವೇಶ್ವರಯ್ಯ ಮ್ಯೂಸಿಯಂ – ಮಲ್ಯ ಆಸ್ಪತ್ರೆ ಮಾರ್ಗವಾಗಿ – ಪಾಲಿಕೆ ಕೇಂದ್ರ ಕಛೇರಿ ಮೂಲಕ ಟೌನ್ ಹಾಲ್ ಗೆ ಮುಕ್ತಾಯವಾಯಿತು. ಜಾಥಾ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಬಿಬಿಎಂಪಿ ಜಿಲ್ಲಾ ಸಂಸ್ಥೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here